ಶಿವಮೊಗ್ಗ,ಜ.09 : ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ -ಫೆಬ್ರವರಿ 24 ರಿಂದ 5ದಿನಗಳ ಕಾಲ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಮಡಿವಾಳ ಸಮುದಾಯದವರು ಕಾಡಿಗೆ ಹೋಗಿ ಸಂಜೆ ವೇಳೆಗೆ ಮರ ತಂದರು.
ನ್ಯೂಮಂಡ್ಲಿ ಬಳಿ ಮರ ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ಮೆರವಣಿಗೆ ಮೂಲಕ ಹಾಗೂ ಮಂತ್ರ ವಾದ್ಯಗಳ ಮುಖಾಂತರ ಬಿ.ಬಿ.ರಸ್ತೆ ಮೂಲಕ ಗಾಂಧಿ ಬಜಾರ್‌ನ ತವರು ಮನೆಯ ವಿಶ್ವಕರ್ಮ ಸಮುದಾಯದವರಿಗೆ ಮರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಉಪಾಧ್ಯಕ್ಷರುಗಳಾದ ಎನ್.ಉಮಾಪತಿ, ಎಂ.ಕೆ. ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಖಜಾಂಚಿ ತಿಮ್ಮಪ್ಪ, ಕಾರ್ಯದರ್ಶಿಗಳಾದ ಹನುಮಂತಪ್ಪ, ಡಿ.ಎಂ. ರಾಮಯ್ಯ, ಚಂದ್ರಶೇಖರ್, ಸುನಿಲ್, ಸೀತಾರಾಮ್ ನಾಯಕ್, ನಿರ್ದೇಶಕರುಗಳಾದ ಪ್ರಕಾಶ್, ಸುದೀಪ್, ಪ್ರಭಾಕರ್‌ಗೌಡ ಪ್ರಮುಖರಾದ ಶರತ್ ಮರಿಯಪ್ಪ, ರಂಗನಾಥ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
