ಮಧುರ ಪ್ಯಾರಡೈಸ್ ಶಕ್ತಿ ಕೇಂದ್ರ

Kranti Deepa

ಶಿವಮೊಗ್ಗ,ನ.23 : ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಹಾಗೂ ಹಲವು ಯೋಜನೆಗಳ ಮಂಜೂರಾತಿಯಲ್ಲಿ ಮಧುರ ಪ್ಯಾರಡೈಸ್ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ ಎಂದು ಕ್ರಾಂತಿ ದೀಪ ಪತ್ರಿಕೆ ಸಂಪಾದಕ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಎನ್ ಮಂಜುನಾಥ್ ಹೇಳಿದರು.

ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶ್ರೀ ಶಂಕರ್ ನಾರಾಯಣ ಕಾಶಿಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಥುರ ಪ್ಯಾರಡೈಸ್ ರಜತ ಮಹೋತ್ಸವ, ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಉಮಾಶಂಕರ್ ಉಪಾಧ್ಯ ಹಾಗೂ ಎನ್ ಗೋಪಿನಾಥ್ ಇವರುಗಳು ನನ್ನ ಕನಸಿನ ಶಿವಮೊಗ್ಗ ತಂಡವನ್ನ ರಚಿಸಿಕೊಂಡು ಶಿವಮೊಗ್ಗ ನಗರದಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನ ಕೈಗೊಂಡರು ಶಿವಮೊಗ್ಗ ನಗರದಲ್ಲಿ ಇಂದು ಸಾಕಷ್ಟು ಗಿಡಮರಗಳು ಬೆಳೆದಿದ್ದರೆ ಅದರ ಹಿಂದೆ ನನ್ನ ಕನಸಿನ ತಂಡ ಕಾರ್ಯವಿದೆ ಎಂದು ಹೇಳಿದರು.

ಶಿವಮೊಗ್ಗ ನಗರಕ್ಕೆ ವೈದ್ಯಕೀಯ ಕಾಲೇಜನ್ನು ತರುವ ನಿಟ್ಟಿನಲ್ಲಿ ಹಲವು ಸಭೆಗಳನ್ನ ಮಾಡಲಾಯಿತು.  ಕೆಲವು ಸಭೆಗಳ ಪ್ರಯತ್ನ ವಿಫಲವಾಯಿತು. ಅಂತಿಮ ವಾಗಿ ನಡೆಸಿದ ಪ್ರಯತ್ನದಿಂದಾಗಿ ಶಿವಮೊಗ್ಗಕ್ಕೆ ವೈದ್ಯ ಕೀಯ ಕಾಲೇಜ್ ಮಂಜೂರಾಯಿತು ಎಂದರು.

ಉಮಾಶಂಕರ ಉಪಾಧ್ಯ ಹಾಗೂ ಮಥುರ ಗೋಪಿನಾಥ್ ಇವರುಗಳಿಗೆ ಶಿವಮೊಗ್ಗದ ಜನಪ್ರತಿ ನಿಽಯಾಗುವ ಎಲ್ಲಾ ಅರ್ಹತೆ ಇತ್ತು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಅದು ಈಡೇರಲಿಲ್ಲ ಎಂದರು.
ಸಭೆಯಲ್ಲಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್ ರವಿಕುಮಾರ್, ಎನ್ ಗೋಪಿನಾಥ್,  ನಿರ್ಮಲ ಕಾಶಿ, ಉಮಾಶಂಕರ್ ಉಪಾಧ್ಯ ಇತರರು ಉಪಸ್ಥಿತರಿದ್ದರು.

Share This Article
";