ಶಿವಮೊಗ್ಗ,ಫೆ. 14 : ತೀರ್ಥಹಳ್ಳಿಯ ಒಂದೇ ಹೆಸರಿನ (ಗಣೇಶ್.ಎಸ್, ಗಣೇಶ್.ಟಿ, ಗಣೇಶ್.ಯು) ಮೂವರು ಬಾಲ್ಯದ ಗೆಳೆಯರು ಇವರ ಸುತ್ತಮತ್ತ ಹೆಣೆದಿರುವ ಸಿನಮಾ ಇಂಟರ್ವೆಲ್ ಮಾ. 7 ರಂದು ಈ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಈ ಸಿನಿಮಾದ ನಿರ್ದೇಶಕ ಭರತ್ ವರ್ಷ, ಈ ಮೂವರೂ ಹುಡುಗರು ತರಲೆಗಳು. ಇವರು ಇಂಜಿನಿಯರಿಂಗ್ ಓದಿ, ಕೆಲಸಕ್ಕಾಗಿ ಬೆಂಗಳೂರು ಅಲೆದು ಅಲೆದು ಸಾಕಾಗಿದೆ. ಇಷ್ಟು ಮಾತ್ರವಲ್ಲದೇ ಗಣೇಶ್ ಎಸ್. ಇಬ್ಬರು ಹುಡುಗಿಯರೊಂದಿಗೆ ಪ್ರೇಮ ಪ್ರಸಂಗ. ಮೂವರ ಮೋಜು ಮಸ್ತಿ, ಚೇಷ್ಟೆ. ಹಾಗೆ ಗಣೇಶ್ ಎಸ್, ನಿಶು ಅಥವಾ ಸಿಹಿ ಇಬ್ಬರಲ್ಲಿ ಯಾರನ್ನು ಮದುವೆ ಆಗುತ್ತಾನೆ.
ಗಣೇಶ್ ಎಸ್ ಜೀವನದಲ್ಲಿ ಎನೇಲ್ಲಾ ನಡೆಯುತ್ತದೆ, ಹಾಗೂ ಮೂರು ಹಳ್ಳಿ ಹುಡುಗರ ತುಂಟತನ, ಪ್ರೇಮ ಹಾಗು ಹಾಸ್ಯಮಯ ಇರುವ ಕುಟುಂಬದೊಂದಿಗೆ ವೀಕ್ಷಿಸಬಹುದಾದ ಚಿತ್ರ ಇದಾಗಿದೆ ಎಂದರು.
ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ನಗರದಲ್ಲಿ ಚಿತ್ರೀಕರಣ ಮಾಡಲಾಗಿದೆ, ಈ ಚಿತ್ರವು ರಾಜ್ಯದಾದ್ಯಂತ ಮಾರ್ಚ್ 07 ರಂದು ತೆರೆ ಕಾಣಲಿದೆ. ತಾರಾಗಣದಲ್ಲಿ ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸಹನಾ ಆರಾಧ್ಯ, ಸಮಿಕ್ಷಾ, ದಾನಂ ಶಿವಮೊಗ್ಗ , ಸುಕಿ, ಚರಿದ್ರರಾವ್, , ರಂಗನಾಥ ಮೊದಲಾದವರಿದ್ದಾರೆ. ಸಂಗೀತ ವಿಕಾಸವಸಿಷ್ಠ ಅವರದ್ದು , ಸಂಕಲನ : ಶಶಿಧರ್ ಪುಟ್ಟೇಗೌಡ ಸಾಹಸ : ಚಂದ್ರುಬಂಡೆ ನೃತ್ಯ : ರಘು ಅವರದ್ದು. ಈಗಾಗಲೇ ರೋರಿಂಗ್ ಸ್ಟಾರ್ ಶ್ರೀಮುರುಳಿರವರು ಚಿತ್ರದ ಟೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ ಎಂದರು.