ಡಿಸಿಸಿ ಬ್ಯಾಂಕ್‌ನಿಂದ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಎಂ. ಶ್ರೀಕಾಂತ ನೇಮಕ

Kranti Deepa

ಶಿವಮೊಗ್ಗ, ಅ.15 :  ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನ ಆಡಳಿತ ಮಂಡಳಿಯಲ್ಲಿ  ಅಪೆಕ್ಸ್ಸ್ ಬ್ಯಾಂಕಿನ  ಪ್ರತಿನಿಧಿಯನ್ನಾಗಿ  ಎಂ. ಶ್ರೀಕಾಂತ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರಾಗಿರುವ ಶ್ರೀಕಾಂತ್  ಆ. 13 ರಿಂದ ಜಾರಿಗೆ ಬರುವಂತೆ ನಾಮನಿರ್ದೇಶನಗೊಂಡಿದ್ದಾರೆ.  ಇಲ್ಲಿಯವರೆಗೆ ಈ ಸ್ಥಾನದಲ್ಲಿದ್ದ  ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಲ್. ಜಗದೀಶ್ ಅವರ ನಾಮನಿರ್ದೇಶನವನ್ನು ವಾಪಸ್ ಪಡೆಯಲಾಗಿದೆ ಎಂದು ಅಪೆಕ್ಸ್ಸ್ ಬ್ಯಾಂಕಿನ ಪ್ರಕೆಟಣೆ ತಿಳಿಸಿದೆ.

Share This Article
";