ಶಿವಮೊಗ್ಗ,ಜ.16 : ಮಹಾನಗರ ಪಾಲಿಕೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಪಾಲಿಕೆ ಹಣಕಾಸು ವಿಭಾಗದ ಮ್ಯಾನೇಜರ್ ಸಿದ್ದೇಶ್ ನನ್ನು ಗುರುವಾರ ಸಂಜೆ ಖೆಡ್ಡಾಕ್ಕೆ ಕೆಡವಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಪಾಲಿಕೆಯ ಹಣಕಾಸು ವಿಭಾಗದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೇಶ್ ಗುತ್ತಿಗೆದಾರರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗುತ್ತಿದೆ.
ಗುತ್ತಿಗೆದಾರರೊಬ್ಬರಿಂದ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಸಿದ್ದೇಶ್ ನನ್ನು ಬೇಟೆಯಾಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಇನ್ನೂ ಬಿಟ್ಟುಕೊಟ್ಟಿಲ್ಲ.