ಶಿವಮೊಗ್ಗ,ಅ.20 : ಇಲ್ಲಿನ ಸಾಗರ ರಸ್ತೆಯ ಸಿಂಹ ಧಾಮದಿಂದ ಮುದ್ದಿನಕೊಪ್ಪ ಮತ್ತು ಯರೇಕೊಪ್ಪ ಗ್ರಾಮಕ್ಕೆ ತೆರಳುವ ರಸ್ತೆಯಗೆ ಸಿಡಿಲು ಬಡಿದಿದೆ.
ಇಂದು ಬೆಳಗ್ಗೆ ಭಾರಿ ಮಳೆಯ ವೇಳೆ ಕಾಣಿಸಿಕೊಂಡ ಸಿಡಿಲು ರಸ್ತೆ ಗೆ ಬಡಿದಿರುವ ದೃಶ್ಯ ಲಭ್ಯವಾಗಿದೆ.
ರಸ್ತೆಯನ್ನೇ ಸೀಳಿರುವ ಫೊಟೊವೊಂದು ಕಳುಹಿಸಿರುವ ಸ್ಥಳೀಯರು ಸಿಡಿಲ ಪರಿಣಾಮ ರಸ್ತೆ ಹಾನಿಯಾಗಿರುವುದಾಗಿ ದೂರಿದ್ದಾರೆ. ಆ ಸಮಯದಲ್ಲಿ ರಸ್ತೆಯಲ್ಲಿ ಯಾರು ಇಲ್ಲವಾದುದರಿಂದ ದೊಡ್ಡ ದುರಂತವೊಂದು ತಪ್ಪಿದೆ.
ಸಿಡಿಲು ಬಡಿದು ಸ್ವಲ್ಪ ಸಮಯದ ನಂತರ ಸ್ಥಳೀಯರು ಸ್ಥಳದ ಪೋಟೋವನ್ನು ಪತ್ರಿಕೆಗಳಿಗೆ ಹಾಗೂ ವೈಬ್ ಸೈಟ್ ಗೆ ಕಳಿಸಿಕೊಟ್ಟಿದ್ದಾರೆ. ಸಂಬಂಧ ಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಬೇಕೆಂದು ಕೋರಿದ್ದಾರೆ.