ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳನ ಬಂಧನ

Kranti Deepa

ಶಿವಮೊಗ್ಗ,ಅ.19 : ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗ ದಲ್ಲಿರುವ ಬುದ್ಧನಗರದಲ್ಲಿ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟ್ಯಾಪ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದೊಡ್ಡ ಪೇಟೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಜರುಗಿ ಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಹಿಂಭಾಗ ಬುದ್ಧ ನಗರದ ಹತ್ತಿರ ಲ್ಯಾಪ್ ಟಾಪ್ ಗಳನ್ನು ಕೈಯಲ್ಲಿ ಹಿಡಿದುಕೊಂಡ ವ್ಯಕ್ತಿಯೋರ್ವ ರಸ್ತೆಯಲ್ಲಿ ಓಡಾಡುವ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ದೊಡ್ಡಪೇಟೆ ಪೊಲೀಸರಿಗೆ ಬಂದಿದೆ.

ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಪೊಲೀಸರಿಗೆ  ಅಪರಿ ಚಿತ ವ್ಯಕ್ತಿ ಎಡಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಕೊಂಡು ಬಲಗೈಯಲ್ಲಿ 1 ಲ್ಯಾಪ್ ಟಾಪ್ ಹಿಡಿದು ಕೊಂಡು ರಸ್ತೆಯಲ್ಲಿ ಓಡಾಡುವ ಜನರಿಗೆ ಲ್ಯಾಪ್ ಟಾಪ್ ಮಾರಾಟ ಮಾಡುವುದು ಕಂಡು ಬಂದಿದೆ.

ಆತನನ್ನು ವಶಕ್ಕೆ ಪಡೆದು ವಿಚಾರಿಸಿದ ಪೊಲೀಸರಿಗೆ ನಾಲ್ಕು ಲ್ಯಾಪ್ ಟ್ಯಾಪ್ ಗಳು ಪತ್ತೆಯಾಗಿದೆ.  ೪ ಲ್ಯಾಪ್ ಟಾಪ್ ಗಳ ದಾಖಲಾತಿಗಳನ್ನು ಕೇಳಿದಾಗ ಯಾವುದೇ ದಾಖಲಾತಿಗಳು ನೀಡದೆ,  ಈಗ್ಗೆ 3-4 ತಿಂಗಳ ಹಿಂದೆ ಶಿವಮೊಗ್ಗ, ಭದ್ರಾವತಿ ಮತ್ತು ಕಡೂರು ಬಸ್ ಸ್ಟ್ಯಾಂಡ್ ಗಳಲ್ಲಿ ಕಳ್ಳತನ ಮಾಡಿಕೊಂಡು ಬಂದು ಮನೆಯ ಲ್ಲಿಟ್ಟಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ.

ಮನೆಯಲ್ಲಿಟ್ಟಿದ್ದ ಕಳ್ಳಮಾಲನ್ನು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ  ಆರೋಪಯ ಕೈಯಲ್ಲಿದ್ದ ಸುಮಾರು 63,000/- ರೂ ಬೆಲೆಬಾಳುವ ೪ ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳವು ಮಾಲನ್ನು ಮಾರಾಟಕ್ಕೆ ಬಂದನನ್ನ ಜ್ಯೋತಿ ನಗರದ ಮೊಹಮದ್ ಶಕೀಲ್ ಎಂದು ಗುರುತಿಸಲಾಗಿದೆ.

Share This Article
";