ಶಿವಮೊಗ್ಗ,ಅ.29 : ನಗರದ ಲಕ್ಷ್ಮೀ ಟಾಕೀಸ್ ಬಳಿ 100 ಅಡಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಇಂದು ಮಧ್ಯಾಹ್ನ ಧರೆಗುರುಳಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.ಲಕ್ಷ್ಮೀ ಟಾಕೀಸ್ ಸಮೀಪ ಫ್ರೀಡಂ ಪಾರ್ಕ್‌ನ ಕಾಂಪೌಂಡ್ ಪಕ್ಕದಲ್ಲಿ ಇದ್ದ ಮರ ಧರೆಗುರುಳಿದೆ. ಗಾಳಿ, ಮಳೆಯಿಂದಾಗಿ ಮರ ಉರುಳಿದೆ.
ಟ್ರಾಫಿಕ್ ಸಿಗ್ನಲ್ ಬಿಟ್ಟ ಕೆಲವೇ ಕ್ಷಣದಲ್ಲಿ ಮರ ಉರುಳಿದೆ. ಹಾಗಾಗಿ ರಸ್ತೆಯಲ್ಲಿ ವಾಹನಗಳು ಇರಲಿಲ್ಲ. ದೊಡ್ಡ ಅನಾಹುತ ತಪ್ಪಿದಂತಾಗಿದೆ.ಮರ ತೆರವು ಕಾರ್ಯಾಚರಣೆ ನಂಯರ ಸಂವಾರ ಸುಗಮವಾಗಿದೆ.
, ಮರ ಉರುಳಿದ್ದರಿಂದ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಮತ್ತೊಂದು ಬದಿಯಲ್ಲಿ ಎರಡು ದಿಕ್ಕಿನಲ್ಲಿ ವಾಹನಗಳು ಸಂಚರಿಸಿದವು.
ಲಕ್ಷ್ಮೀ ಟಾಕೀಸ್ ಸಮೀಪ ಸಂಚಾರ ದಟ್ಟಣೆ ಉಂಟಾಗಿತ್ತು.