ಕಳ್ಳನಮನೆಯಲ್ಲಿ ಕೆಜಿಗಟ್ಟಲೆ ಚಿನ್ನ ಪತ್ತೆ

Kranti Deepa

ತೀರ್ಥಹಳ್ಳಿ,ಅ.19: ಹಲವಾರು ಅಪರಾಧಗಳಲ್ಲಿ ಭಾಗಿಯಾಗಿ ಹಾಗೆ ಯೇ ಬೆಂಗಳೂರಿನಲ್ಲಿ ಚಿನ್ನವನ್ನು ಕದ್ದು ತೀರ್ಥಹಳ್ಳಿ ಯಲ್ಲಿ ತಂದಿಟ್ಟಿದ್ದ ಆರೋಪಿಯನ್ನು ಮಾಗಡಿ ಪೊಲೀ ಸರು ತೀರ್ಥಹಳ್ಳಿಗೆ ಕರೆ ತಂದಿದ್ದ ಘಟನೆ  ನಡೆದಿದೆ.

ಹಮೀದ್ ಹಂಜ ಎಂಬ ಆರೋಪಿ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತಮ್ಮ ಮನೆಯಲ್ಲಿ ತಂದು ಹೂತಿ ಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀ ಸರು ಸುಮಾರು 1 ಕೆಜಿಗೂ ಜಾಸ್ತಿ ಆಗುವಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.

ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವ ನಾದ ಹಂಜನ ಮೇಲೆ 70 ರಿಂದ 80 ಕ್ಕೂ ಹೆಚ್ಚು ಕೇಸ್ ಗಳಿದ್ದು ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾ ಗಿದ್ದ.ಕೊಲೆ, ವಸೂಲಿ, ವಂಚನೆ ಪ್ರಕರಣಗಳಲ್ಲಿ ಈತ ಭಾಗಿ ಯಾಗಿರುವುದು ತಿಳಿದು ಬಂದಿದೆ.

Share This Article
";