ಕಾಳಿಂಗನಹಳ್ಳಿ ರೈತರಿಂದ ಹಕ್ಕುಪತ್ರಕ್ಕೆ ಆಗ್ರಹ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Auto; ?cct_value: 0; ?AI_Scene: (200, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ, ಫೆ. 17:  ಭದ್ರಾವತಿ ತಾಲ್ಲೂಕು ಕಸಬಾ ಹೋಬಳಿ ಕಾಳಿಂಗನಹಳ್ಳಿ ಗ್ರಾಮದ ಸರ್ವೆ ನಂ 1 ರಲ್ಲಿ 96 ಜನರು ತಲಾ 2-00 ಎಕರೆ, 1-00  ಎಕರೆ, 0-20 ಗುಂಟೆ ಈ ರೀತಿ ಜಮೀನು ಸುಮಾರು 50 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಫಾರಂ ನಂ 50, 53 ಹಾಗೂ 57 ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಸಹ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ.

ಕೂಡಲೇ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ದಸಂಸ ಸಂಯೋಜಕ ಜಿಲ್ಲಾ ಸಮಿತಿ ಆಗ್ರಹಿಸಿದೆ. ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಮಿತಿಯವರು, ಜಿಲ್ಲಾ ವ್ಯಾಪ್ತಿಯಲ್ಲಿ 2017-18 ನೇ ಸಾಲಿನಲ್ಲಿ ಸಾಗುವ ಜೇಡಿ ನೀಡಿದರೂ ಸಹ ಖಾತೆ ಪಹಣಿ ಮ್ಯುಟೇಷನ್ ಆಗಿಲ್ಲ.

ಕೆಲವು ಪಹಣಿ ದಾಖಲೆಯಲ್ಲಿ ಬೆಳ ಕಾಲಂಗಳು ಕೈಬಿಟ್ಟು ಬೆಳೆ ನಮೂದಾಗದೆ ಇರುವುದರಿಂದ ಬೆಳೆ ನಮೂದಿಸಿ ಕೊಡಬೇಕು. ವಸತಿ ಅಥವಾ ಭೂಮಿಗಾಗಿ 94 ಸಿ ಅಡಿಯಲ್ಲಿ ಸರ್ಕಾರಕ್ಕೆ ಹಣ ಪಾವತಿಸಿಕೊಂಡಿದ್ದರೂ ಸಹ ಇದುವರೆವಿಗೂ ಹಕ್ಕು ಪತ್ರವನ್ನು ವಿತರಣೆ ಮಾಡಿಲ್ಲ ಎಂದು ಹೇಳಿದರು. ತಾಲ್ಲೂನ ಕಡು ಬಡವರಿಗೆ ಮತ್ತು ದಂತ ಕುಟುಂಬದವರಿಗೆ ವಸತಿ ಮತ್ತು ನಿವೇಶನ ಇದುವರೆಗೂ ಮಂಜೂರು ಮಾಡಿಲ್ಲ

. ಅರಣ್ಯ ಪ್ರದೇಶದ ಅರಣ್ಯ ಹಕ್ಕು ಸಮಿತಿ ಅಡಿಯಲ್ಲಿ ಎಸ್ ಸಿ/ ಎಸ್ ಟಿ ಹಾಗೂ ಒಂದು ವರ್ಗದವರಿಗೆ ಸಾಗುವಳ ಚೀಟಿ ನೀಡಬೇಕು. ಸಾಗುವಳಿ ಚೀಟಿಗಾಗಿ ಟ ಟ ಹಣ ಪಾವತಿಸಿಕೊಂಡಿದ್ದರೂ ಸಹ ಇದುವರೆಗೂ ಸಾಗುವಳಿ ಚೀಟಿ ನೀಡದೆ ಇರುವುದರಿಂದ ಸಾಗುವಳಿ ಚೀಟಿ ಕೊಡಿಸಿಕೊಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಾದ್ಯಾಂತ ಇರುವ ಅನುಪಯುಕ್ತ ಕೆರೆ ಕಟ್ಟೆ ಜಮೀನುಗಳಲ್ಲಿ ರೈತರು ಅಡಿಕ ತಂಗು, ಬಾಳೆ ಭತ್ತ ಜೋಳ, ಹೀಗೆ ವ್ಯವಸಾಯ ಮಾಡುತ್ತಿರುವವರ ಸ್ವಾದೀನದಲ್ಲಿರುವ ಎಲ್ಲಾ ರೈತ ಕುಟುಂಬಗಳನ್ನು ಜಮೀನಿನಿಂದ ತೆರವುಗೊಳಿಸಬಾರದು. ಮಂಜೂರಾತಿಗೆ ಸಾಧ್ಯವಿರುವ ಪ್ರದೇಶವನ್ನು ಮಂಜೂರಾತಿ ಮಾಡಿಕೊಡಬೇಕು. ತೆರವುಗೊಳಿಸುವ ಪ್ರದೇಶದಲ್ಲಿ ಆ ರೈತರಿಗೆ ಬದಲಿ ಭೂಮಿ ಮಂಜೂರು ಮಾಡಿಕೊಟ್ಟ ನಂತರ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ. ದಸಂಸ ರಾಜ್ಯ ಸಮಿತಿ ಸದಸ್ಯ ಚೌಡಪ್ಪ, ಜಿಲ್ಲಾ ಸಂಯೋಜಕ ಆರ್. ಜಗದೀಶ, ಸಂಘಟನಾ ಸಂಯೋಜಕ ಮೈಲಾರಪ್ಪ, ಮತ್ತು ಗಣೇಶ್ ಮೊದಲಾದವರಿದ್ದರು.

Share This Article
";