ಶಿವಮೊಗ್ಗ, ಡಿ.25 : ಪ್ರತ್ಯಂಗೀರ ಮಹಾ ಸಂಸ್ಥಾನದ ದೇವಾಲಯದಲ್ಲಿ ನಾಗರ ಹಾವಿಗಿಂತ 14 ಪಟ್ಟು ಹೆಚ್ಚು ವಿಷ ಹೊಂದಿದೆ ಎಂದೆ ಹೇಳಲಾಗುವ ಕಡಂಬಳ ಎಂಬ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.
ಸುಮಾರು 4 ಅಡಿ ಉದ್ದವಿರುವ ಈ ಹಾವನ್ನು ಮಂಗಳವಾರ ರಾತ್ರಿ ಪ್ರತ್ಯಂಗೀರ ಮಹಾ ಸಂಸ್ಥಾನದ ಸುಪ್ರೀತ್ ಗುರೂಜಿ ನೋಡಿ ತಕ್ಷಣ ಉರಗ ಸಂರಕ್ಷಕ ಸ್ನೇಕ್ ಕಿರಣ್‌ಗೆ ಫೋನ್ ಮಾಡಿದ್ದರು.
ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವನ್ನು ಹಿಡಿದು ರಕ್ಷಿಸಿದ್ದಾರೆ. ದೇಶದಲ್ಲೇ ಅತಿ ಅಪಾಯಕಾರಿ ಹಾವುಗಳಲ್ಲಿ ಇದು ಒಂದಾಗಿದ್ದು, ಇದು ಕಚ್ಚಿದರೆ ವ್ಯಕ್ತಿ ಬದುಕುವ ಸಂಭವ ಬಹಳ ಕಡಿಮೆ ಈ ಹಾವನ್ನು ನೋಡಿದರೆ ನನಗೆ ಭಯವಾಗುತ್ತದೆ ಈ ಹಾವಿನಿಂದ ಸ್ವಲ್ಪ ಜಾಗೃತರಾಗಿರಬೇಕು ಎಂಬ ಸಲಹೆಯನ್ನು ಹಾವು ಸಂರಕ್ಷಣೆ ವೇಳೆ ಸ್ನೇಕ್ ಕಿರಣ್ ನೀಡಿದ್ದಾರೆ.