ಭದ್ರಾವತಿ,ಫೆ. 14 : ಬಿಜೆಪಿ ಎಂಎಲ್‌ಸಿ ಒಬ್ಬರು ಕಾಂಗ್ರೇಸ್ ಪಕ್ಷದ ಪ್ರಭಾವಿ ಮಹಿಳಾ ಸಚಿರೊಬ್ಬರಿಗೆ ಅವಮಾನವಾಗುವ ರೀತಿ ಮಾತನಾಡಿದರು ಎಂದು ಆರೋಪಿಸಿ ಬಿಜೆಪಿ ಎಂಎಲ್‌ಸಿಯನ್ನು ರಾತ್ರಿಯಿಡಿ ಜಿಲ್ಲೆಯ ಠಾಣೆಗಳಿಗೆ ಸುತ್ತಾಡಿಸಿದ ಕಾಂಗ್ರೇಸ್ ಸರಕಾರ, ಭದ್ರಾವತಿ ಶಾಸಕರ ಪುತ್ರ ಮಹಿಳಾ ಅಧಿಕಾರಿ ಜ್ಯೋತಿ ಎಂಬುವವರಿಗೆ ಮೊಬೈಲ್ ಕರೆಯಲ್ಲಿ ಅತ್ಯಂತ ಕೀಳು ಭಾಷೆ ಯಲ್ಲಿ ನಿಂದಿಸಿದ್ದರು ಸಹ ಈವರೆಗೆ ಶಾಸಕರ ಪುತ್ರನನ್ನು ಪೊಲೀಸ್ ಅಧಿಕಾರಿಗಳು ಏಕೆ ಬಂಽಸಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಮಹಿಳಾ ಅಧಿಕಾರಿಯೊಬ್ಬರಿಗೆ ಶಾಸಕರ ಪುತ್ರ ಅವಾಚ್ಯವಾಗಿ ಮೊಬೈಲ್‌ನಲ್ಲಿ ಬಯ್ದ ರೆಂಬ ವಿಷಯದ ಮೆಲೆ ಶುಕ್ರವಾರ ತಾಲೂಕು ಕಚೇರಿ ಮುಂಭಾಗ ಶಾಸಕರ ಹಾಗೂ ಅವರ ಪುತ್ರನ ವಿರುದ್ಧ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿ ಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗ ವಹಿಸಿ ಮಾತನಾಡಿದರು, ಮಹಿಳಾ ಅಧಿಕಾರಿಯ ಮೇಲೆ ತೋರಿರುವ ದರ್ಪ ರಾಜ್ಯ ಮಟ್ಟದಲ್ಲಿ ಸುದ್ಧಿಯಾಗಿ ನಾಗರೀಕರು ತಲೆತಗ್ಗಿ ಸುವಂತಾಗಿದೆ. ಇಲ್ಲಿನ ಪೊಲೀಸ್ ಅಧಿಕಾರಿ ಗಳು ಪಾರದಶಕತೆ ಯಿಂದ ಕೆಲಸ ಮಾಡಿ ಕೂಡಲೆ ಘಟನೆ ಕುರಿತಂತೆ ಶಾಸಕರ ಪುತ್ರನ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡಿರುವ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿ ಪ್ರಕರಣದ ಸತ್ಯಾಂಶವನ್ನು ಬೆಳಕಿಗೆ ತರುವ ಕೆಲಸ ಮಾಡಲಿ.
ಕೇಂದ್ರ ಉಕ್ಕು ಮಂತ್ರಿಗಳಾದ ಕುಮಾರಸ್ವಾಮಿ ಅವರು ಸರ್.ಎಂ.ವಿ ಸ್ಥಾಪಿತ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಪುನಶ್ಚೇತನ ಕಾರ್ಯವನ್ನು ಸವಾಲಾಗಿ ಸ್ವಾಕರಿಸಿದ್ದು, ಈ ದಿಕ್ಕಿನಲ್ಲಿ ಅವಿರತವಾದ ಸತತ ಪ್ರಯತ್ನ ಮಾಡುತ್ತಿದ್ದು, ಶೀಘ್ರದಲ್ಲಿಯೆ ಈಬಗ್ಗೆ ಒಳ್ಳೆಯ ಸುದ್ಧಿ ಸಿಗಲಿದೆ ಎಂದರು.
ಶಿವಮೊಗ್ಗ ಗ್ರಾಮಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳು ಪಕ್ಕದ ಕ್ಷೇತ್ರವಾದ ಹೊಳೇಹೊನ್ನೂರಿಗೂ ಹಬ್ಬು ತ್ತಿದ್ದು ಈಬಗ್ಗೆ ಇಲ್ಲಿನ ಶಾಸಕರು ಗಮನಹರಿಸಿ ಆತ್ಮಾವಲೋಕನದಿಂದ ಕಾರ್ಯನಿರ್ವಹಿಸಲಿ ಎಂದರು.
ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಮಹಿಳಾ ಅಧಿಕಾರಿಗೆ ಮೊಬೈಲ್ಕರೆಯಲ್ಲಿ ಅಶ್ಲೀಲವಾಗಿ ನಿಂದಿಸಿದ ಕುರಿತಂತೆ ಬಿಜೆಪಿ ಮತ್ತು ಜೆಡಿಎಸ್ ಪಿತೂರಿ ಎಂದು ಹೇಳುತ್ತಿದ್ದಾರೆ ಆದರೆ ಇದರಲ್ಲಿ ಇದರಲ್ಲಿ ಯಾರದೇ ಪಿತೂರಿ ಯಲ್ಲ ಎಂದು ನಾವು ಧರ್ಮಸ್ಥಳದಲ್ಲಿ ಬಂದು ಹೇಳಲು ಸಿದ್ಧರಿದ್ದೇವೆ ಆದರೆ ಶಾಸಕರ ಪುತ್ರ ಮಹಿಳಾ ಅಧಿಕಾರಿಗೆ ಬೈದಿಲ್ಲ ಎಂದು ವಾಯ್ಸ್ ನಮ್ಮದಲ್ಲವೆಂದು ಧರ್ಮಸ್ಥಳದಲ್ಲಿ ಬಂದು ದೇವರ ಮುಂದೆ ಹೇಳಲಿ ಎಂದು ಈ ಮೂಲಕ ಅವರಿಗೆ ಸವಾಲು ಹಾಕುತ್ತಿದ್ದೇನೆ ಎಂದರು.
ಶಾರದ ಅಪ್ಪಾಜಿ ಮಾತನಾಡಿ, ಭದ್ರಾವತಿ ಯಲ್ಲಿ ಓಸಿ, ಇಸ್ಪೀಟ್, ಗಾಂಜಾ ಮುಂತಾದ ಅಕ್ರಮ ಚಟುವಟಿಕೆಗಳು ಮಿತಿ ಮೀರಿವೆ ಜೊತೆಗೆ ಈಗ ಶಾಸಕರ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬಯ್ದಿರುವುದು ಸೇರ್ಪಡೆಯಾಗಿದೆ.
ಶಾಸಕರ ಹಾಗೂ ಅವರ ಕುಟುಂಬದವರ ದೌರ್ಜನ್ಯ ಎಷ್ಟು ಎಂಬುದನ್ನು ತೋರಿಸುತ್ತದೆ. ಶಾಸಕರ ಪುತ್ರ ತನ್ನ ಮಗ ಅಧಿಕಾರಿಯನ್ನು ನಿಂದಿಸಿದ ವಾಯ್ಸ್ ಜೆಡಿಎಸ್ ಬಿಜೆಪಿ ಕುತಂತ್ರ ಎಂದು ಹೇಳುವ ವ್ಯಕ್ತಿ ಅಧಿಕಾರ ಉಳಿಸಿಕೊಳ್ಳಲು ನಾಳೆ ನನ್ನ ಮಗನೇ ಅಲ್ಲವೆಂದು ಹೇಳಿದರೂ ಹೇಳಬಹುದು. ಕ್ಷೇತ್ರದ ಜನರು ಅವರ ದಬ್ಬಾಳಿಕೆ ಸುಳ್ಳು ಕೇಸುಗಳಿಗೆ ಹೆದರಬೇಡಿ, ನಮ್ಮೊಂದಿಗೆ ಧೈರ್ಯವಾಗಿ ಬನ್ನಿ ಎಂದರು.
ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್, ಎ.ಅಜಿತ್, ಜೆ.ಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿದರು. ಟಿ.ಚಂದ್ರೇಗೌಡ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಣ್ಣ, ಮುಖಂಡರಾದ ಮಧುಕುಮಾರ್, ಮಧುಸೂಧನ್, ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಕೆಎಂಎಫ್ ಆನಂದ್ ಮುಂತಾದವರಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ಪರಸಪ್ಪ ಕುರುಬರ ಅವರಿಗೆ ನಿಖಿಲ್‌ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಘಟನೆ ಕುರಿತಂತೆ ಶಾಸಕರ ಪುತ್ರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಡಾ.ರಾಜಕುಮಾರ್ ರಸ್ತೆ, ರಂಗಪ್ಪ ವೃತ್ತ, ನ್ಯಾಯಾಲಯದ ರಸ್ತೆ ಮುಖಾಂತರ ವೇದಿಕೆ ಕಾರ್ಯಕ್ರಮದವರಿಗೆ ಪ್ರತಿಭಟನಾಕಾರರು ಮುಖಂಡರೊಂದಿಗೆ ಶಾಸಕರ ರಾಜಿನಾಮೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಮಾಧವಾಚಾರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.
ವಿಐಎಸ್‌ಎಲ್‌ಗೆ ಕಾಯಕಲ್ಪ
ಕೇಂದ್ರ ಉಕ್ಕು ಪ್ರಾಕಾರದ ವೈಜಾಕ್ ಸಂಸ್ಥೆಯನ್ನು ಉಳಿಸಿದಂತೆ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸುವ ಕಾರ್ಯ ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಸಾಗಿದೆ. ಆಂಧ್ರ ಪ್ರದೇಶದ ವೈಜಾಕ್‌ನ (ವಿಶಾಖಪಟ್ಟಣಂ) ಕೇಂದ್ರ ಉಕ್ಕು ಪ್ರಾಕಾರಕ್ಕೆ ಸೇರಿದ ಆರ್‌ಐಎಲ್ ಸಂಸ್ಥೆಯನ್ನು ಉಳಿಸಲು ಕೇವಲ 6 ತಿಂಗಳಲ್ಲಿ ಕೇಂದ್ರ ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನ ಮಂತ್ರಿ ಮೋದಿ ಹಾಗೂ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್ ಬಳಿ ಚರ್ಚಿಸಿ 11,440 ಕೋಟಿ ರೂ ಅನುದಾನ ಹೂಡಿಕೆ ಮಾಡಿ ೨೬ ಸಾವಿರ ಕುಟುಂಬಗಳನ್ನು ಉಳಿಸಿ ರಕ್ಷಿಸಿ ಅವರ ಬದುಕು ಹಸನಾಗಿಸಿದ್ದಾರೆ. ಅದರಂತೆ ಸರ್.ಎಂ.ವಿಶ್ವೇಶ್ವರಾಯ ಅವರ ಹೆಸರು ಉಳಿಸಲು ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಲೇ ಬೇಕೆಂದು ತೀರ್ಮಾನಿಸಿ 15 ಸಾವಿರ ಕೋಟಿ ರೂ ಬಂಡವಾಳ ತೊಡಗಿಸಲು ಪಣ ತೊಟ್ಟಿದ್ದಾರೆ. ಅತೀ ಶೀಘ್ರವಾಗಿ ಎಲ್ಲಾ ರೀತಿಯ ಪ್ರಯತ್ನ ಸಾಗಿದೆ. ಇದರಿಂದ ಇಲ್ಲಿನ ಜನರ ಜೀವನ ಮತ್ತು ಊರು ಉಳಿಯಲಿದೆ.