ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನ ವಿವಾದಕ್ಕೆ ತೆರೆ ಸಾರ್ವಜನಿಕರ ಇಚ್ಛಾಶಕ್ತಿಗೆ ಸಿಕ್ಕ ಜಯ: ಶಾಸಕ

Kranti Deepa

ಶಿವಮೊಗ್ಗ, ಏ.09  : ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನ ಶಿವಮೊಗ್ಗ ನಗರದ ನಾಗರೀಕರ ಅತ್ಯಂತ ಹೆಚ್ಚಿನ ವಾಹನ ಚಲನವಲನ ಇರುವ ಸ್ಥಳವಾಗಿದ್ದು, ಕಚೇರಿಗೆ ಬರುತ್ತಿರುವ ಸಾರ್ವಜನಿಕರಿಗೆ ಹಾಗೂ ವಿವಿಧ ಮೂಲಗಳಿಂದ ಕಾರ್ಯಕ್ಕಾಗಿ ಭೇಟಿ ನೀಡುವ ಜನರಿಗೆ ಅನುಕೂಲವಾಗುವ ಸ್ಥಳವಾಗಿದೆ.

ಹಲವು ದಿನಗಳಿಂದ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ಸಂಬಂಧಿತ ವಿವಾದ ಇದೀಗ ಸುಖಾಂತ್ಯ ಕಂಡಿರುವುದು ಅತ್ಯಂತ ಸಂತೋಷದ ಸಂಗತಿ. ಸಂಬಂಧಿತ ಇಲಾಖೆಗಳ ನಡುವಿನ ಸಮಾಲೋಚನೆ ಹಾಗೂ ನಿರ್ಧಾರಗಳ ಬಳಿಕ, ಮೈದಾನವನ್ನು ಸಾರ್ವಜನಿಕ ವಾಹನ ಪಾರ್ಕಿಂಗ್‌ಗಾಗಿ ಮತ್ತೆ ತೆರೆಯುತ್ತಿರುವುದು ಶಿವಮೊಗ್ಗ ನಗರದ ನಾಗರಿಕರಿಗೆ ಸಂತಸವನ್ನು ತಂದಿದೆ.

ಇದು ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಶಿವಮೊಗ್ಗದ ಪ್ರಜ್ಞಾವಂತ ನಾಗರೀಕರ ಇಚ್ಛಾಶಕ್ತಿಗೆ ಸಿಕ್ಕ ಜಯವಾಗಿದೆ ಎಂದು ಶಾಸಕ ಎಸ್. ಎನ್ ಚನ್ನಬಸಪ್ಪ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಪರಿವಾರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ನಗರದ ಶಾಂತಿಯುತ ವಾತಾವರಣವನ್ನು ಕಾಯ್ದುಕೊಂಡ ಪ್ರಜ್ಞಾವಂತ ಶಿವಮೊಗ್ಗ ನಾಗರಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವಿವಾದನು ಬಗೆಹರಿಸುವಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳಿಗೆ ಹಾಗೂ ರಕ್ಷಣಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

Share This Article
";