ಶಿವಮೊಗ್ಗ,ಅ.19: ಶಿವಮೊಗ್ಗ -ಬೆಂಗಳೂರು ಜನಶತಾಬ್ದಿ ಮತ್ತು ಹುಬ್ಬ ಳ್ಳಿ -ಬೆಂಗಳೂರು ಜನ ಶತಾಬ್ದಿ ರೈಲುಗಳು ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ನಿಲುಗಡೆ ನೀಡಲಿವೆ.
ಈ ಕುರಿತು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಟ್ವೀಟ್ ಮಾಡಿದ್ದಾರೆ. ಇದರಿಂದ ಇವ ರೆಡೂ ರೈಲುಗಳಿಗೆ ಹೊಸತೊಂದು ಸ್ಟಾಪ್ ಸೇರಿಸಿ ದಂತಾಗಿದೆ.
ಈ ಜನ ಶತಾಬ್ದಿ ರೈಲುಗಳಿಗೆ ತಿಪಟೂರಿನಲ್ಲಿ ನಿಲು ಗಡೆ ನೀಡಬೇಕೆಂಬುದು ತಿಪಟೂರು ಜನತೆಯ ಬಹು ದಿನದ ಬೇಡಿಕೆಯಾಗಿತ್ತು. ಇದೀಗ ಈ ಬೇಡಿಕೆಯನ್ನು ಈಡೇರಿಸಲಾಗಿದ್ದು, ಶೀಘ್ರವೇ ನಿಲುಗಡೆಗೆ ಚಾಲನೆ ನೀಡಲಾಗುತ್ತದೆ.
ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ರೈಲು ಪ್ರತಿ ದಿನ ಬೆಳಗ್ಗೆ 5.15 ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರ ಡಲಿದೆ. ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸಿಕೆರೆ, ತುಮಕೂರು, ಯಶವಂತಪುರದಲ್ಲಿ ನಿಲು ಗಡೆ ಇತ್ತು. ಬೆಳಗ್ಗೆ 9.50 ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ.ಸಂಜೆ 5.15 ಕ್ಕೆ ಮೆಜೆಸ್ಟಿಕ್‌ನಿಂದ ಹೊರಡುವ ರೈಲು ರಾತ್ರಿ 9.40 ಕ್ಕೆ ಶಿವಮೊಗ್ಗ ತಲುಪಲಿದೆ.
ಈ ಮಾರ್ಗ ದಲ್ಲಿಯು ಜನ ಶತಾಬ್ದಿ ರೈಲು ಇವೇ ನಿಲ್ದಾಣ ಗಳಲ್ಲಿ ಸ್ಟಾಪ್ ನೀಡುತ್ತಿತ್ತು. ಇನ್ಮುಂದೆ ತಿಪಟೂರು ನಿಲ್ದಾಣದಲ್ಲಿಯು ರೈಲು ಸ್ಟಾಪ್ ನೀಡಲಿದೆ.