ಶಿವಮೊಗ್ಗ,ಮಾ.22 : ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿ ಎಂದೇ ಹೆಸರಾಗಿರುವ ಎಂ. ಶ್ರೀಕಾಂತ್ ರವರ ಜನ್ಮದಿನ ಸಮಾರಂಭ ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು.
ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ, ಶುಭ ಹಾರೈಸಿದರು.
ಶ್ರೀಕಾಂತ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎಂ. ಶ್ರೀಕಾಂತ್ ರವರ ಜನ್ಮದಿನದ ಸಮಾರಂಭಕ್ಕೆ ಅಭಿಮಾನಿಗಳ ದಂಡೆ ಹರಿದು ಬಂದಿತ್ತು. ಶ್ರೀಕಾಂತ್ ಸಮಾರಂಭದ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು ಯುವ ಸಮೂಹ ಪಟಾಕಿ ಸಿಡಿಸಿ ಸಂಭ್ರಮಿಸಿತು ಬ್ಲಾಸ್ಟರ್‌ಗಳ ಮೂಲಕ ಶ್ರೀಕಾಂತ್ ಮೇಲೆ ಪುಷ್ಪವೃಷ್ಠಿ ಸುರಿಸಲಾಯಿತು.
ಅವರು ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮದ ಕಟ್ಟೆ ಒಡೆಯಿತು ಎಲ್ಲರೂ ವೇದಿಕೆಯತ್ತ ನುಗ್ಗಿ ತಮ್ಮ ನೆಚ್ಚಿನ ಯುವ ನಾಯಕನ ಕೈ ಕುಲುಕಲು ಮುಂದಾದರು. ಇವರನ್ನು ನಿಯಂತ್ರಿಸಲು ಆಯೋಜಕರು ಹರ ಸಾಹಸ ಪಟ್ಟರು.
ಪುನೀತ್ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ನೀನೇ ರಾಜ ಕುಮಾರ ಹಾಡು ಆರಂಭವಾಗುತ್ತಿದ್ದಂತೆ ಆಭಿಮಾನಿಗಳು ಎಲ್ಲರೂ ತಮ್ಮ ಮೊಬೈಲ್ ಟಾರ್ಚ್‌ಗಳನ್ನು ಹೊತ್ತಿಸಿ ಕೊಂಡು ಸಂಭ್ರಮಿಸಿದರು. ಇಷ್ಟೆಲ್ಲಾ ಆಗುತ್ತಿದ್ದರೂ ಶ್ರೀಕಾಂತ್ ಸಮಚಿತ್ತದಿಂದ ಇದ್ದುದು ವಿಶೇಷವಾಗಿತ್ತು.
ನಿಜಕ್ಕೂ ಶ್ರೀಕಾಂತ್ ಜನನಾಯಕರಾಗಿ ಎಲ್ಲರ ಮೆಚ್ಚಿನ ಕಣ್ಮಣಿಯಾಗಿ ಹೊರಹೊಮ್ಮಿದ ದೃಶ್ಯ ಕಂಡು ಬಂದಿತು.ವಿಶೇಷವಾಗಿ ಆಶಾ ಕಾರ್ಯಕರ್ತೆಯರು ಮಹಿಳಾ ಸಂಘಟನೆಗಳ ಪ್ರಮುಖರು ವಿವಿಧ ಸಂಘಟನೆಗಳ ಪದಾಕಾರಿಗಳು ಸೇರಿದಂತೆ ಅನೇಕರು ಶ್ರೀಕಾಂತ್ ಜನ್ಮದಿನದಲ್ಲಿ ಪಾಲ್ಗೊಂಡು ಅವರಿಗೆ ಜನ್ಮದಿನದ ಶುಭಾಶಯಗಳು ಸಲ್ಲಿಸಿದರು.
ಸಭಾಂಗಣದ ಒಳಗೆ ಸ್ಥಳಾವಕಾಶವಿಲ್ಲದೆ ಹೊರಭಾಗ ದಲ್ಲಿ ಗುಂಪುಗೂಡಿ ನಿಂತಿದ್ದರು. ರಸ್ತೆಯಲ್ಲೂ ಸಹ ನೂರಾರು ಅಭಿಮಾನಿಗಳು ನಿಂತಿದ್ದು ವಿಶೇಷಗಿತ್ತು. ಎಲ್ಲರ ಕೈಯಲ್ಲೂ ಹೂವಿನ ಬೊಕ್ಕೆಗಳು ಕಾಣುತ್ತಿ ದ್ದವು. ಕಾಂತಣ್ಣ ಕಾಂತಣ್ಣ ಎಂಬ ಮಾತು ಎಲ್ಲರ ಬಾಯಲ್ಲಿ ಕೇಳಿ ಬರುತ್ತಿತ್ತು ಇನ್ನು ಕೆಲವರು ಅಯ್ಯಾ ಎಂದು ಪ್ರೀತಿಯಿಂದ ಹೇಳುತ್ತಿದ್ದಿದ್ದು ಕಂಡು ಬಂತು.