ಜ.22 : ಕುವೆಂಪು ವಿವಿ ಘಟಿಕೋತ್ಸವ ಕಾಗೋಡು ಸಹಿತ ಮೂವರಿಗೆ ಗೌರವ ಡಾಕ್ಟರೆಟ್

Kranti Deepa

ಶಿವಮೊಗ್ಗ,ಜ.20 : ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ೩೪ನೇ ವಾರ್ಷಿಕ ಘಟಿಕೋತ್ಸವ ಜನವರಿ 22 ರಂದು ಬೆಳಿಗ್ಗೆ 10:30  ಗಂಟೆಗೆ ನಡೆಯಲಿದೆ.

ಇದರಲ್ಲಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಸಹಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ|| ಎಂ. ಸಿ. ಸುಧಾಕರ್ ಉಪಸ್ಥಿತರಿರುವರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಪ್ರಕಟಿಸಿದರು.

ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಭಾಷಣಕಾರರಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಆಗಮಿಸುವರು ಎಂದರು. ಈ ವರ್ಷದ ಘಟಿಕೋತ್ಸವದಲ್ಲಿ 104 ಅಭ್ಯರ್ಥಿಗಳು ಪಿ ಎಚ್ ಡಿ ಪಡೆಯಲಿದ್ದಾರೆ. 1885 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.

ಜ್ಞಾನ ಸಹ್ಯಾದ್ರಿಯ ವಿದ್ಯಾರ್ಥಿ ಕನ್ನಡ ವಿಭಾಗದ ಬಿ ಜೆ ವಸಂತಕುಮಾರ್ 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನವನ್ನು ಪಡೆಯಲಿದ್ದಾರೆ. ಜ್ಞಾನ ಸಹ್ಯಾ ದ್ರಿಯ ಸಾನಿಯಾ ಫಿರ್ದೋಸ್ ವಿಜ್ಞಾನಿ ಭಾಗದಲ್ಲಿ ಆರು ಸುವರ್ಣ ಪದಕಗಳನ್ನು, ಸಮಾಜಶಾಸ್ತ್ರ ವಿಭಾಗದ ಎಸ್ ಎಸ್ ರಕ್ಷಿತಾ, ವ್ಯವಹಾರ ನಿರ್ವಹಣಾ ಅಧ್ಯಯನದ ಎಸ್ ರಕ್ಷಿತ್, ಜೈವಿಕ ತಂತ್ರಜ್ಞಾನ ವಿಭಾಗದ ಎಸ್. ಶುಭಶ್ರೀ, ಎ ಟಿ ಎನ್ ಸಿ ಸಿ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಹರ್ಷಿತಾ ತಲಾ 5 ಸುವರ್ಣ ಪದಕ ಪಡೆಯಲಿದ್ದಾರೆ ಎಂದರು.

ನಾಲ್ಕು ವಿದ್ಯಾರ್ಥಿಗಳು ತಲಾ ನಾಲ್ಕು ಸ್ವರ್ಣ ಪದಕಗಳನ್ನು, ಎಂಟು ವಿದ್ಯಾರ್ಥಿಗಳು ತಲಾ ಮೂರು ಸುವರ್ಣ ಪದಕಗಳನ್ನು ಪಡೆಯುವರು. ಈ ಬಾರಿ ಕಲಾವಿಭಾಗದಿಂದ ಒಟ್ಟು 64, ವಾಣಿಜ್ಯ ವಿಭಾಗದಿಂದ 18, ಶಿಕ್ಷಣ ವಿಭಾಗದಿಂದ 18, ವಿಜ್ಞಾನ ವಿಭಾಗದಿಂದ 104 ಅಭ್ಯರ್ಥಿಗಳು ಸೇರಿದಂತೆ ಒಟ್ಟು 204 ಅಭ್ಯರ್ಥಿಗಳು ಪಿಎಚ್‌ಡಿ ಪಡೆದಿದ್ದಾರೆ ಎಂದರು.

ಕಲಾ ವಿಭಾಗದಲ್ಲಿ ೬೪ ಪಿಎಚ್‌ಡಿ, 443 ಎಂಎ, 29 ಎಂಎಸ್ ಡಬ್ಲೂ, 9 ಪಿಜಿ ಇನ್ ಆರ್ಕಿಯಾಲಜಿ ಆಂಡ್ ಮ್ಯೂಸಿಯಾಲಾಜಿ, 2893  ವಿದ್ಯಾರ್ಥಿಗಳು ಬಿಎ, 85 ಬಿ ಎಸ್ ಡಬ್ಲೂ ಪದವಿ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 18 ಪಿಎಚ್ಡಿ, 606 ಎಂಕಾಂ, 114 ಎಂಬಿಎ, 34 ಎಂಬಿಎ ಟೂರ್ ಆಂಡ್ ಟ್ರಾವೆಲ್ಸ್ ಮ್ಯಾನೇಜ್‌ಮೆಂಟ್, 5014 ಬಿಕಾಂ, 537 ಬಿಬಿಎ, 19 ಬಿಬಿಎ ಟೂರ್ ಆಂಡ್ ಟ್ರಾವೆಲ್ ಪದವಿ ಪಡೆಯುವರು.

ಶಿಕ್ಷಣ ವಿಭಾಗದಲ್ಲಿ 18 ಪಿಎಚ್ಡಿ, 7 ಎಂ. ಇಡಿ, 32 ಎಂ. ಪಿ. ಇಡಿ, 901 ಬಿ. ಇಡಿ, 27 ಬಿಪಿಇಡಿ, 44, ಪಿಜಿ ಡಿಪ್ಲೊಮಾ ಇನ್ ಯೋಗ ಪಡೆಯುವರು ಎಂದು ವಿವರಿಸಿದರು. ವಿಜ್ಞಾನ ವಿಭಾಗದಲ್ಲಿ 104 ಜನ ಪಿಎಚ್ ಡಿ, ಎಂಸಿಎ 33 ವಿದ್ಯಾರ್ಥಿಗಳು, ಎಂ ಎಸ್ ಸಿ 925, ಎಂ ಎಸ್ ಸಿ ಆನರ್‍ಸ್- ಎಂಎಲ್ ಐಎಸ್ ಸಿ 14, , ಬಿ ಎಸ್ ಸಿ 1856, ಬಿಎಸ್ಸಿ ಆನರ್‍ಸ್ 23, ಬಿಸಿಎ 870 ವಿದ್ಯಾರ್ಥಿಗಳು ಪಡೆಯುವರು ಎಂದರು.

ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂಎ ವಿಭಾಗದಲ್ಲಿ 1602, ಎಂಕಾಂನಲ್ಲಿ 562, ಎಲ್‌ಎಲ್‌ಎಂ ನಲ್ಲಿ ಮೂವರು, ಎಂ ಎಸ್ ಸಿ ಯಲ್ಲಿ 606, ಎಂಎಲ್‌ಐಎಸ್ಸಿನಲ್ಲಿ ಇಬ್ಬರು ವಿದ್ಯಾರ್ಥಿಗಳು 2022ರಲ್ಲಿ ಉತ್ತೀರ್ಣರಾಗಿದ್ದಾರೆ.

2023 ರಲ್ಲಿ 685  ಎಂಎ,ಎಂಎಕಾಂನಲ್ಲಿ 323 , ಎಂಬಿಎದಲ್ಲಿ 122, ಎಂ ಎಸ್ ಸಿ ಯಲ್ಲಿ 434 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಅವರೆಲ್ಲರಿಗೂ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು ಎಂದರು. ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಗುವುದು. ಅವರೆಂದರೆ ಮಾಜಿ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಉನ್ನಿಕೃಷ್ಣನ್ ಮತ್ತು ಡಾ. ನಾಗರಾಜ್ ಎಂದು ವಿವರಿಸಿದರು.

Share This Article
";