ಶಿವಮೊಗ್ಗ, ಆ.12 : ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಬಿಜೆಪಿ ಸದಸ್ಯರಾಗುವುದು ಒಳ್ಳೆಯದು ಎಂದು ಕಾಂಗ್ರೆಸ್ ಮುಖಂಡ ಎಚ್ ಸಿ ಯೋಗೇಶ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸರಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಸಂಸದ ಬಿ ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆ ನೀಡಿರುವುದನ್ನು ಆಕ್ಷೇಪಿಸಿದ್ದಾರೆ.
ಆ. 5 ರಂದು ನಡೆದ ಈ ಸಭೆಯಲ್ಲಿ ಸಂಸದರ ಅಭಿಮಾನಿಗಳ ಬಳಗದ ಜೊತೆ ಷಡಾಕ್ಷರಿ ಹಾಜರಿರುವುದರ ಚಿತ್ರ ಬಿಡುಗಡೆ ಮಾಡಿದ ಯೋಗೇಶ್, ಷಡಾಕ್ಷರಿ ಸರಕಾರಿ ನೌಕರರ ಹಿತ ಕಾಯುತ್ತಾರೋ ಅಥವಾ ಬಿಜೆಪಿ ಹಿತ ಕಾಯುತ್ತಾರೆಯೋ ಎಂದು ಪ್ರಶ್ನಿಸಿದರು. ಷಡಕ್ಷರಿ ಬಹಿರಂಗವಾಗಿ ಬಿಜೆಪಿ ಸದಸ್ಯರಾಗಿ ಆ ಪಕ್ಷದ ಕೆಲಸ ಮಾಡಲಿ ಅದನ್ನು ಬಿಟ್ಟು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಕೆಲಸ ಮಾಡುವುದು ಎಂದು ಹೇಳಿದರು. ರಾಘವೇಂದ್ರ ಅವರ ಜನ್ಮದಿನದ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಷಡಕ್ಷರಿ ಮಾಡುತ್ತಿದ್ದಾರೆ ಅವರು ರಾಜಕೀಯೇತರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ರಾಜಕೀಯ ಸೇರಲಿ ಎಂದು ಹೇಳಿದರು.