ಐಪಿಎಲ್ ಪಂದ್ಯಗಳು 1 ವಾರ ಮುಂದೂಡಿಕೆ

Kranti Deepa
ನವದೆಹಲಿ,ಮೇ.09: ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಉಲ್ಬಣಿಸಿರುವ ಕಾರಣ, ಐಪಿಎಲ್ ಕ್ರಿಕೆಟ್ ಟೂರ್ನಿಯ ಉಳಿದ ಪಂದ್ಯಗಳನ್ನು ಒಂದು ವಾರ ಮುಂದೂಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಪಂದ್ಯಗಳ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಪಠಾಣ್‌ಕೋಟ್ ಮೇಲೆ ದಾಳಿ ನಡೆಸಲು ಪಾಕ್ ಪಡೆಗಳು ಗುರುವಾರ ರಾತ್ರಿ ಪ್ರಯತ್ನಿ ಸಿದ್ದವು.
ಇದರೊಂದಿಗೆ, ಗಡಿಯಲ್ಲಿ ಸಂಘರ್ಷ ಏರ್ಪ ಟ್ಟಿತ್ತು. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್  – ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮಧ್ಯದಲ್ಲೇ ರದ್ದುಪಡಿಸಲಾಗಿತ್ತು. ಇದರ ಬೆನ್ನಲ್ಲೇ, ಟೂರ್ನಿಯನ್ನು ಒಂದು ವಾರ ಮುಂದೂಡಲಾಗಿದೆ.

Share This Article
";