ಶಿವಮೊಗ್ಗ, ಅ.02 : ಜಿಲ್ಲಾ 24 ಮನೆ ಸಾಧುಶೆಟ್ಟಿ ಮಹಿಳಾ ಸಂಘ ಶಿವಮೊಗ್ಗ ಇವರ ಶ್ರೀ ಕಾಮಾಕ್ಷಿ ಸಮುದಾಯ ಭವನ ಉದ್ಘಾಟನಾ ಸಮಾರಂಭ ಆ. 4 ನೇ ಸೋಮವಾರ ಸಮಯ : ಬೆಳಿಗ್ಗೆ 10 ಗಂಟೆಗೆ ಜ್ಯೂವೆಲ್‌ರಾಕ್ ಹೋಟೆಲ್ ಪಕ್ಕ ಮಿಷನ್ ಕಾಂಪೌಂಡ್ ಮೊದಲ ಮುಖ್ಯ ರಸ್ತೆಯ ಮೊದಲ ಕ್ರಾಸ್‌ನಲ್ಲಿರುವ ಕಟ್ಟಡದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಸಂಘದ ಅಧ್ಯಕ್ಷೆ ನಾಗರತ್ನಾ ಸೋಮಶೇಖರ್, ಸಮುದಾಯ ಭವನದ ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ, ಜಯಲಕ್ಷ್ಮೀ ಮತ್ತು ಕೆಎಸ್ ಈಶ್ವರಪ್ಪನವರ ಭೋಜನಾಲಯದ ಉದ್ಘಾಟನೆಯನ್ನು ಸಚಿವ ಮಧು ಬಂಗಾರಪ್ಪ, ಉದ್ಘಾಟಿಸುವರೆಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ನಾಗರತ್ನಾ ಸೋಮಶೇಖರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್ಸಿ ಬಲ್ಕಿಷ್‌ಬಾನು, ಡಿ.ಎಸ್. ಅರುಣ್ ,ಡಾ|| ಧನಂಜಯ ಸರ್ಜಿ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ರಾಜು ಮತ್ತು ಎನ್. ರಮೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶೋಭ ಕೆ.ಆರ್., ಬೆಂಗಳೂರಿನ ತಹಶೀಲ್ದಾರ್ ಕೇಶವಮೂರ್ತಿ, ಸಾಧುಶೆಟ್ಟಿ ಸಮಾಜದ ಅಧ್ಯಕ್ಷ ಎನ್. ಉಮಾಪತಿ , ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಜಿ. ಅಶ್ವಿನಿಮೊದಲಾದವರು ಆಗಮಿಸುವರೆಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಾಜದ ಮುಖಂಡ ವಿ. ರಾಜು, ಸೋಮಶೇಖರ್, ಮಹಿಳಾ ಘಟಕದ ಉಪಾಧ್ಯಕ್ಷೆ ಗುಣಮ್ಮ, ಖಜಾಂಚಿ ವನಜಾಕ್ಷಿ, ಪ್ರ. ಕಾರ್ಯದರ್ಶಿ ಸರಸ್ವತಮ್ಮ ಮೊದಲಾದವರಿದ್ದರು.