ಡಿಸಿಸಿ ಬ್ಯಾಂಕ್‌ನಲ್ಲಿ ನವೀಕೃತ ಕಾರ್ಪೊರೇಟ್ ಕಚೇರಿ ಆರಂಭ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Night; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ,ನ.20 : ಕಾರ್ಪೋರೇಟ್ ಆಡಳಿತ ಮಾದರಿಯಲ್ಲಿ ಸಿಬ್ಬಂದಿಗಳು ಹೊಸ ವಾತಾವರಣದಲ್ಲಿ ಸಹಕರ ಸಂಸ್ಥೆಗಳಲ್ಲೂ ಉತ್ತಮ ಸೇವೆ ನೀಡಲಿ ಎಂಬ ಉದ್ದೇಶದಿಂದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಮೊದಲನೇ ಮಹಡಿಯಲ್ಲಿ ನೂತನ ನವೀಕೃತ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.

ಸಹಕಾರಿ ಸಪ್ತಾಹದ ಕೊನೆ ದಿನವಾದ ಬುಧವಾರ ಸುಸಜ್ಜಿತ ಕಚೇರಿ ಲೋಕಾರ್ಪಣೆ ಮಾಡಲಾಗಿದೆ ಎಂದ ಅವರು, ಡಿಸಿಸಿ ಬ್ಯಾಂಕ್ ನಲ್ಲಿ 3 ಲಕ್ಷ ಗ್ರಾಹಕರಿದ್ದು, ಅವರ ದಾಖಲೆಗಳು ಸುರಕ್ಷಿತವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಮಾದರಿಯಾಗಿ ಅತ್ಯಂತ ಭದ್ರತೆ ಇರುವ ಕಚೇರಿ ನಿರ್ಮಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಡಿಸಿಸಿ ಬ್ಯಾಂಕ್ ಗೆ 35 ವರ್ಷ ತುಂಬಲಿದ್ದು, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ರಾಜ್ಯದಲ್ಲೇ ಮಾದರಿಯಾಗಿ ಹಮ್ಮಿಕೊಂಡಿದ್ದೇವೆ ಎಂದರು.

ಸೈಬರ್ ಕ್ರೈಂಗಳು ಜಾಸ್ತಿಯಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ಸುಭದ್ರ ವ್ಯವಸ್ಥೆ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದರು.

ಹಾಲು ಉತ್ಪಾದಕರಿಗೆ ಹೆಚ್ಚಿನ ಸೇವೆ ನೀಡುವ ದೃಷ್ಟಿಯಿಂದ ಶಿಮುಲ್ ಸಹಯೋಗದೊಂದಿಗೆ ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ತೆರೆಯಲಾಗುವುದು . ಶಿವಮೊಗ್ಗ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಗಳಿಸಿದೆ. ಕೃಷಿಯೇತರ ನರ್ಸಿಂಗ್ ಹೋಂ, ಆರೋಗ್ಯ, ಶಿಕ್ಷಣ ಸಂಸ್ಥೆಗಳಿಗೆ 3 ಕೋಟಿ ರೂ.ವರೆಗೆ ಸಾಲ ನೀಡುತ್ತೇವೆ ಎಂದರು.

ಈ ವರ್ಷ ನಮ್ಮ ಬ್ಯಾಂಕಿನಲ್ಲಿ ಕೂಡ ಹೊಸ ಹೊಸ ಸಾಲ ನೀಡಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 1.20  ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ ಇದೆ ಎಂದರು.
7ನೇ ವೇತನ ಆಯೋಗದ ಶಿಫಾರಸಿನಂತೆ ಡಿಸಿಸಿ ಬ್ಯಾಂಕ್ ಸಿಬ್ಬಂದಿಗೂ ಕೂಡ ವೇತನ ನೀಡುತ್ತಿದ್ದೇವೆ ಎಂದರು.

ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಜಿ.ಎನ್. ಸುಧೀರ್, ಕೆ.ಪಿ, ರುದ್ರೇಗೌಡ, ಸಿ. ಹನುಮಂತಪ್ಪ, ಮಹಾಲಿಂಗಯ್ಯ ಶಾಸ್ತ್ರಿ, ಬಸವರಾಜ್ ಡಿ.ಎಲ್., ಉಪ ನಿಬಂಧಕ ನಾಗಭೂಷಣ ಕಲ್ಮನೆ, ಸಿಇಒ ಅನ್ನಪೂರ್ಣ, ಹೆಚ್.ಎಸ್. ರವೀಂದ್ರ, ಮಧುಸೂದನ್ ಎಸ್. ನಾವಡ ಮೊದಲಾದವರಿದ್ದರು.

ಡಿಸಿಸಿ ಬ್ಯಾಂಕ್ ನಿಂದ ಎಲ್ಲಾ ಆನ್‌ಲೈನ್ ಸೇವೆಗಳು ಪ್ರಾರಂಭವಾಗಿದ್ದು, ಫೋನ್ ಪೇ ಕೂಡ ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿದೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ನೇರವಾಗಿ ನಬಾರ್ಡ್‌ಗೆ ಲಿಂಕ್ ಕಲ್ಪಿಸುವ ಸಾಫ್ಟ್ ವೇರ್ ಕೂಡ ಅಳವಡಿಸಲಾಗುವುದು. ಇದೊಂದು ಮಾದರಿ ವ್ಯವಸ್ಥೆ ಆಗಲಿದೆ. ಠೇವಣಿದಾರರಿಗೆ ಭದ್ರತೆ ಕೊಡುವ ಕಾಯ್ದೆಯನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಮಂಡಿಸಲಿದ್ದಾರೆ. ೧೫ ದಿನಗಳ ಒಳಗೆ ಡಿಸಿಸಿ ಬ್ಯಾಂಕ್‌ನ ಮೂರು ಹೊಸ ಶಾಖೆಗಳು ಕಾರ್ಯಾಚರಿಸಲಿದ್ದು, ಹೋಬಳಿ ಮಟ್ಟದಲ್ಲೂ ಕೂಡ ಇನ್ನೂ ೧೯ ಶಾಖೆಗಳನ್ನು ತೆರೆಯಲು ಆರ್.ಬಿ.ಐ. ಅನುಮತಿ ಕೇಳಲಾಗಿದೆ.
– ಆರ್ ಎಮ್ ಮಂಜುನಾಥ ಗೌಡ, ಅಧ್ಯಕ್ಷ

Share This Article
";