ಹಕ್ಕುಪತ್ರ ಕೊಡದಿದ್ದರೆ ಜನಪ್ರತಿನಿಧಿಗಳ ನಿವಾಸದೆದುರು ಧರಣಿ ಉಡುಗಣಿ, ಗಾಂಧಿನಗರ ರೈತರ ಎಚ್ಚರಿಕೆ

module:1facing:0; ?hw-remosaic: 0; ?touch: (-1.0, -1.0); ?modeInfo: ; ?sceneMode: Night; ?cct_value: 0; ?AI_Scene: (200, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ , ಫೆ. 18 : ಕೇಂದ್ರ ಸರ್ಕಾರದ 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯಂತೆ 27.04 78 ರ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿದ ರೈತರು ಪಹಣಿ ಹೊಂದಿದ್ದರೆ ಮೂರು ಎಕರೆ ಜಮೀನು ಮಂಜೂರು ಮಾಡಬಹುದು ಎಂದಿದೆ. ಆದರೆ ರಾಜ್ಯದಲ್ಲಿ ಈವರೆಗೆ ಒಬ್ಬರಿಗೂ ಈ ರೀತಿ ಜಮೀನನ್ನು ಯಾರಿಗೂ ಮಂಜೂರು ಮಾಡಿಲ್ಲ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಹೇಳಿದೆ.

ಸಮಿತಿಯ ಸಂಚಾಲಕ ತೀ. ನ. ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶಿಕಾರಿಪುರ ತಾಲೂಕಿನ ಉಡುಗಣಿ, ಗಾಂಧಿನಗರ ಮುಂತಾದ ಗ್ರಾಮಗಳಲ್ಲಿ ಈ ಹಕ್ಕು ಪತ್ರ ಪಡೆಯಲು ಅರ್ಹರಾದ ನೂರಾರು ರೈತ ಕುಟುಂಬಗಳಿವೆ. ಇವರಿಗೆ ಹಕ್ಕು ಪತ್ರ ನೀಡಿಲ್ಲ. ಶೀಘ್ರ ಇದನ್ನು ದೊರಕಿಸಿಕೊಡದಿದ್ದಲ್ಲಿ ಜನಪ್ರತಿನಿಧಿಗಳ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರದ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ೧೯ ವರ್ಷವಾದರೂ ಅದು ಇನ್ನೂ ಗ್ರಾಮಗಳಲ್ಲಿ ಜಾರಿಯಾಗಿಲ್ಲ. ಸುಪ್ರೀಂ ಕೋರ್ಟ್ ಕೂಡ ರೈತರಿಗೆ ನ್ಯಾಯ ಕೊಡಿ ಎಂದು ಹೇಳಿದ್ದರೂ ಸಹ ಆ ಆದೇಶವನ್ನು ಉಲ್ಲಂಘಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 80,000 ಇಂತಹ ಅರ್ಜಿದಾರರು ಇದ್ದಾರೆ. ಅವರ ಅರ್ಜಿ ಇತ್ಯರ್ಥ ಆಗುವವರೆಗೆ ರೈತರನ್ನು ಅವರು ಇರುವ ಜಾಗದಿಂದ ಒಕ್ಕಲೆಬ್ಬಿಸಬಾರದು, ಅಕ್ರಮವಾಗಿ ರೈತರ ಮೇಲೆ ಪ್ರಕರಣ ದಾಖಲಿಸಬಾರದು ಎಂದಿದೆ. ಆದರೆ ರೈತರ ಹೊಲ -ತೋಟಗಳಲ್ಲಿ ಅಗಳ ತೆಗೆಯಲಾಗುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ 1978 ಅರಣ್ಯ ಭೂಮಿಯ ಕಾನೂನು ಪ್ರಕಾರ ಸುಮಾರು ೫ ಸಾವಿರಕ್ಕೂ ಹೆಚ್ಚು ಕುಟುಂಬಗಳು ಭೂಮಿಯನ್ನು ಪಡೆಯಲು ಅರ್ಹವಾಗಿವೆ. ಸಾಗರ, ಶಿಕಾರಿಪುರ, ಸೊರಬದಲ್ಲಿ ಈ ರೀತಿಯ ರೈತರು ಹೆಚ್ಚಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಸಭೆ ನಡೆಸಿದ ವೇಳೆ ಈ ಸಂಬಂಧ ದಾಖಲಾತಿಗಳನ್ನು ಸಲ್ಲಿಸಿ ಹಕ್ಕುಪತ್ರ ಕೊಡಲು ಮನವಿ ಮಾಡಲಾಗಿತ್ತು. ಸಂಸದ ರಾಘವೇಂದ್ರ ಸಭೆ ನಡೆಸಿದಾಗಲೂ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಬೇಸರಿಸಿದರು.

ಕೂಡಲೇ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅವರ ಮನೆ ಮತ್ತು ಕಚೇರಿಯ ಎದುರು ಧರಣಿ ಆರಂಭಿಸಲಾಗುವುದೆಂದು ಎಚ್ಚರಿಸಿದರು ಪತ್ರಿಕಾಗೋಷ್ಟಿಯಲ್ಲಿ ಉಡುಗಣಿ, ಗಾಂಧಿನಗರ ಗ್ರಾಮದ ರೈತರಾದ ಸೋಮಶೇಖರಪ್ಪ, ಉಡುಗಣಿ ಕೊಟ್ರೇಶ್, ನಯೀಂ ಪಾಶಾ, ಲಕ್ಷ್ಮಣಪ್ಪ, ರೇವಣಪ್ಪ, ಮಲ್ಲಪ್ಪ, ಪರಶುರಾಮ ಮೊದಲಾದವರಿದ್ದರು.

Share This Article
";