ಶಿವಮೊಗ್ಗ, ಜು. 16: ದೇವಸ್ಥಾನದ ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಿದ ಘಟನೆ ಕೋಟೆಗಂಗೂರಿನ ಅಜ್ಜಪ್ಪಸ್ವಾಮಿ ದೇವಸ್ಥಾನದಲ್ಲಿ ಜುಲೈ 12 ರ ರಾತ್ರಿ ಸಂಭವಿಸಿದೆ.
ಹುಂಡಿ ಒಡೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವಸ್ಥಾನದ ಒಳಗೆ ನುಗ್ಗಿದ ಕಳ್ಳರು ಹುಂಡಿ ಒಡೆದು ಸುಮಾರು 60,000 ಕಾಣಿಕೆ ಹಣ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜು.12 ರ ರಾತ್ರಿ 7 ಗಂಟೆಗೆ ಅರ್ಚಕ ಬಸವರಾಜಪ್ಪ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿಕೊಂಡು ಹೋಗಿದ್ದರು. ಜು.13 ರಂದು ಬೆಳಗ್ಗೆ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ಕೆ ಜಯಣ್ಣ ಎಂಬುವವರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೇವಸ್ಥಾನದಲ್ಲಿ ಹುಂಡಿ ಒಡೆದು ಕಳ್ಳತನ ಮಾಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೇನ್ ಕೋಟ್ ಧರಿಸಿ ದೇವಸ್ಥಾನದ ಒಳಗೆ ನುಗ್ಗಿದ ಮೂವರು ಕಳ್ಳರು ಹುಂಡಿಯನ್ನು ಒಡೆದಿದ್ದಾರೆ. ಟವಲ್‌ನಲ್ಲಿ ಕಾಣಿಕೆ ಹಣನ್ನು ಸೇರಿಸಿ ಕೊಂಡೊಯ್ದಿದ್ದಾರೆ.
ಕೃತ್ಯ ಸಂಬಂಧ ದೇವಸ್ಥಾನದ ಸಹ ಕಾರ್ಯದರ್ಶಿ ಜಗದೀಶ್ ದೂರು ನೀಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.