ಬಾಳೆಹೊನ್ನೂರು,ಡಿ.08 :‘ಇನ್ಸ್ಟಾಗ್ರಾಮ್’ನಲ್ಲಿ ಪರಿಚಯವಾಗಿದ್ದ ಗೃಹಿಣಿ ಯನ್ನು ಮಕ್ಕಳ ಎದುರೇ ಪ್ರಿಯಕರ ಚಾಕುವಿನಿಂದ ಇರಿದು, ಕೆರೆಗೆ ಬಿಸಾಡಿ ಬರ್ಬರ ಹತ್ಯೆ ಮಾಡಿರುವ ಘಟನೆ ಸಮೀಪದ ಕಿಚ್ಚಬ್ಬಿಯಲ್ಲಿ ನಡೆದಿದೆ.
ಇದೇ ಗ್ರಾಮದ ರಾಜೇಶ್ ಅವರ ಪತ್ನಿ ತೃಪ್ತಿ (26 ) ಕೊಲೆ ಯಾದವರು. ಆರೋಪಿ ಚಿರಂಜೀವಿಯನ್ನು ಪೊಲೀಸರು ಬಂಸಿದ್ದಾರೆ.
ಕೊಪ್ಪ ತಾಲ್ಲೂಕಿನ ಹೇರೂರು ಸಮೀಪದ ಸ್ಥಿರೂರಿನ ತೃಪ್ತಿಯನ್ನು ಕಿಚ್ಚಬ್ಬಿಯ ರಾಜೇಶ್ ವಿವಾಹವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಚನ್ನಗಿರಿಯ ಚಿರಂಜೀವಿ ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ತೃಪ್ತಿಯ ಪರಿಚಯ ವಾಗಿ, ಅದು ಪ್ರೀತಿಗೆ ತಿರುಗಿತ್ತು. ತೃಪ್ತಿ ಮಕ್ಕಳನ್ನು ಬಿಟ್ಟು ತಿಂಗಳ ಹಿಂದೆ ಚಿರಂಜೀವಿಯೊಂದಿಗೆ ನಾಪತ್ತೆಯಾ ಗಿದ್ದರು.
ಪತಿ ರಾಜೇಶ್ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ತೃಪ್ತಿ ಮತ್ತು ಚಿರಂಜೀವಿಯನ್ನು ವಿಜಯಪುರದಲ್ಲಿ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆ ತಂದಿದ್ದರು. ಪೊಲೀಸರು ಮನವೊಲಿಸಿ ಪತಿ ಯೊಂದಿಗೆ ತೃಪ್ತಿಯನ್ನು ಕಳುಹಿಸಿ ದ್ದರು. ಮೊಬೈಲ್ ದೂರವಾಣಿ ಸೇರಿ ಎಲ್ಲಾ ಸಂಪರ್ಕವನ್ನೂ ಕಡಿತ ಗೊಳಿಸಿದ್ದರು.
ರಾಜೇಶ್ ಅವರು ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಚಿರಂಜೀವಿ, ಎರಡೂವರೆ ವರ್ಷದ ಮಗಳ ಎದುರಿಗೇ ತೃಪ್ತಿಗೆ ಇರಿದಿದ್ದಾನೆ. ಆಕೆ ಕೂಗಿಕೊಂಡರೂ ಬಿಡದೆ ಸುಮಾರು ೫೦೦ ಮೀಟರ್ ದೂರ ಕಾಫಿ ತೋಟದಲ್ಲಿ ಎಳೆದೊಯ್ದು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.
ಎರಡು ತಿಂಗಳಿಂದ ತೃಪ್ತಿ ಸಂಪರ್ಕಕ್ಕೆ ಸಿಗದಿದ್ದರಿಂದ ಕುಪಿತಗೊಂಡಿದ್ದ ಚಿರಂಜೀವಿ ಈ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.