ಬೆಂಗಳೂರು,ಏ.10 : ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ ಯಾಗಿರುವುದರಿಂದಾಗಿ ರಾಜ್ಯದ ಮೇಲೆ ಪರಿ ಣಾಮ ಉಂಟಾಗಿದ್ದು, ಇಂದಿನಿಂದ ಏ.17 ವರೆಗೆ ಬೆಂಗಳೂರು ಸೇರಿ 15 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಣಾಮವಾಗಿಯೇ ಮುಂಗಾರು ಪೂರ್ವ ಮಳೆ ಚುರುಕಾಗುತ್ತಿದ್ದು, ಒಂದು ವಾರ ಸಮೃದ್ಧ ಮಳೆಯಾಗಲಿದೆ ಎಂದು ತಿಳಿದುಬಂದಿದೆ. ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲ ಝಳವೂ ಹೆಚ್ಚಾಗಿದೆ.