ಶಿವಮೊಗ್ಗ:ಬೆಳ್ಳಂಬೆಳಿಗ್ಗೆ ಹಿಡಿದುಕೊಂಡ ಗುಡುಗು ಸಹಿತ ಮಳೆ ಶಿವಮೊಗ್ಗ ಜನತೆನ್ನ ಬಿಟ್ಟು ಬಿಡದಂತೆ ಕಾಡಲಾರಂಭಿಸಿದೆ. ಗುಡುಗು ಮತ್ತು ಮಿಂಚುಗಳ ಸಹಿತ ಮಳೆಯಿಂದಾಗಿ ನಗರದ ವಾಸಿಗಳು ಹೈರಾಣಾಗಿದ್ದಾರೆ.
ಅ.22 ರ ವರೆಗೆ ಮಳೆ ಎಚ್ಚರಿಕೆ ಇದ್ದರೂ ಇಂದು ಬೆಳಿಗ್ಗೆಯಿಂದಲೇ ಮಳೆ ಸುರಿಯಲು ಆರಂಭಿಸಿದೆ. ಈ ಮಳೆ ಬೆಳಿಗ್ಗೆ ಸುಮಾರು 5-30 ರಿಂದ ಪ್ರಾರಂಭವಾಗಿ ನಿಧಾನವಾಗಿ ಹೆಚ್ಚಲಾರಂಭಿಸಿದೆ.
7-30ರ ವೇಳೆಯಲ್ಲಿ ಗುಡುಗಿನ ಶಬ್ದ ಕೆಲ ಸೆಕೆಂಡುಗಳವರೆಗೆ ನಿರಂತರವಾಗಿ ಕೇಳಿಸಿದ್ದು ಆತಂಕ ಮೂಡಿಸಿದೆ. ಎರಡು ದಿನಗಳವರೆಗಿನ ಮಳೆ ನಿರಂತರವಾಗಿ ಸುರಿದಿರಲಿಲ್ಲ. ಅಲ್ಲಲ್ಲಿ ಸಣ್ಣಮಟ್ಟದಲ್ಲಿ ಮಳೆಯಾಗುತ್ತಿತ್ತು. ಇಂದು ಮಳೆ ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿದೆ.
ಸಧ್ಯಕ್ಕೆ ಮಳೆ ಹೆಚ್ಚಾದ ಪರಿಣಾಮ ಅಣ್ಣಾನಗರದ ಚಾನೆಲ್ ತುಂಬಿ ಮುಖ್ಯ ರಸ್ತೆಗೆ ನೀರು ಹರಿದಿರುವ ದೃಶ್ಯ ಲಭ್ಯವಾಗಿದೆ.ವಾಹನ ಸವಾರರು ಪರೆದಾಡುವಂತಾಗಿದೆ ಹಾಗೂ ಜನ ಜೀವನ ಅಸ್ತವ್ಯಸ್ತ ಗೊಂಡಿದೆ ಇದು ನಿರಂತವಾದರೆ ಅಣ್ಣಾನಗರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯೂ ಹೆಚ್ಚಿದೆ.ಬಸ್ ಸಂಚಾರವೂ ಅಸ್ತವ್ಯಸ್ತಗೊಂಡು ಕೆಲಸಕ್ಕೆಹೋಗುವರಿಗೆ ತೊಂದರೆಯಾಗಿ ರುವ ಮಾಹಿತಿ ಲಭ್ಯವಾಗಿದೆ. ಇಂದು ಯಲ್ಲೋ ಅಲರ್ಟ್ ಘೋಷಿಸಿದ್ದು ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಮಳೆ?
ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ ಭಾರಿ ಮಳೆಯ ಅಲರ್ಟ್ ಇದೆ. ತೀರ್ಥಹಳ್ಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚಿಸಿದೆ.
ಶಿವಮೊಗ್ಗ ತಾಲೂಕಿನಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದೆ.