ಶಿವಮೊಗ್ಗ,ಜು.23 : ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯನ್ನು ಮರು ನಿರ್ಮಾಣ ಮಾಡಲು ಕುಮಾರಣ್ಣ ಶಪಥ ಮಾಡಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬೇಡ. ಅತೀ ಶೀಘ್ರದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮರುಸ್ಥಾಪನೆ ಆಗುತ್ತೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಗುಡ್ಡದ ಮಲ್ಲೇಶ್ವರ ಸಮುದಾಯ ಭವನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿ ಸಲು ಕುಮಾರಣ್ಣ ಕೇಂದ್ರದ ಸಚಿವರಾಗುತ್ತಿದ್ದಂತೆ ವಿಶೇಷ ಕಾಳಜಿ ವಹಿಸಿದ್ದಾರೆ. ನೂರಕ್ಕೆ ನೂರರಷ್ಟು ಇದಕ್ಕೆ ಮರು ಜೀವ ಕೊಡ್ತಾರೆ. ಜಿಲ್ಲೆಯ ಜನತೆಗೆ ಶಾಶ್ವತವಾಗಿ ಬದುಕು ಕಟ್ಟಿಕೊಳ್ಳುವುದಕ್ಕೆ ಈ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ ಕಂಪನಿ ಸಂಪೂರ್ಣವಾಗಿ ಮುಚ್ಚೋಗಿತ್ತು. ಅದನ್ನ ಕುಮಾರಣ್ಣ ಅವರ ದೃಢ ನಿರ್ಧಾರದಿಂದ ರೂ. 11,440 ಕೋಟಿ ವೆಚ್ಚದಲ್ಲಿ ಮರು ಜೀವ ನೀಡಿರು ವುದು ನಮ್ಮ ಕಣ್ಮುಂದೆ ಇದೆ ಎಂದು ಹೇಳಿದರು. ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯ ಕ್ರಮಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡುತ್ತಿರುವುದು ಗಮನಿಸಿದರೆ, ಇದು ಮುಂದಿನ ಚುನಾವಣೆಯ ದಿಕ್ಸೂಚಿ ತೊರಿಸುತ್ತದೆ. ಬದಲಾ ವಣೆಯ ಗಾಳಿ ತೊರುತ್ತದೆ ಎಂದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ನಿಮ್ಮ ಬಳಿಗೆ ನಾನು ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಟಾವಂತರನ್ನು ಗುರುತಿಸಿ ಕಾರ್ಯಕರ್ತರ ಸಮಕ್ಷಮ ತಾಪಂ, ಜಿಪಂ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ, ಕರೆಮ್ಮ ನಾಯಕ್, ಎಸ್.ಎಲ್. ಬೋಜೇಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾಧ್ಯಕ್ಷರಾದ ಕಡಿದಾಳ ಗೋಪಾಲ್, ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಸತೀಶ್, ತಾಲ್ಲೂಕು ಅಧ್ಯಕ್ಷರಾದ ಸತೀಶ್ ಗೌಡ ಸೇರಿದಂತೆ ಸ್ಥಳೀಯ ಜನಪ್ರತಿನಿಗಳು, ಪಕ್ಷದ ಪದಾಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ತಾವು ಸಮಾಜವಾದಿ, ಚಾಂಪಿಯನ್ ಲೀಡರ್ ಎಂದು ಹೇಳುತ್ತಾರೆ. ಆದರೆ ಗ್ಯಾರಂಟಿಗಾಗಿ ಕಾರ್ಮಿಕ ನಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನ, ವಾಲ್ಮೀಕಿ ಹಗರಣದಲ್ಲಿ 187 ಕೋಟಿ ರೂ. ಅಲ್ಲ, 85 ರಿಂದ 90 ಕೋಟಿ ರೂ. ದುರ್ಬಳಕೆ ಆಗಿದೆ ಎಂಬುದನ್ನು ಸ್ವತಃ ಸಿಎಂ ಒಪ್ಪಿದ್ದಾರೆ. ಮೈತ್ರಿ ಒಕ್ಕೂಟದಲ್ಲಿ ಜೆಡಿಎಸ್‌ಗೆ ಎಲ್ಲಿ ಸುಲಭವಾಗಿ ಟಿಕೆಟ್ ಸಿಗುವುದೋ ಅಲ್ಲಿ ಮಾತ್ರ ನಾನು ಪ್ರವಾಸ ಮಾಡುತ್ತಿಲ್ಲ. ಬದಲಾಗಿ ರಾಜ್ಯದ ೨೨೪ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತಿದ್ದೇನೆ. ಜನರೊಂದಿಗೆ ಜನತಾದಳ ಅಭಿಯಾನ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ 45 ದಿನಗಳವರೆಗೆ ಅಭಿಯಾನ ನಡೆಯಲಿದೆ.
– ನಿಖಿಲ್ ಕುಮಾರಸ್ವಾಮಿ,
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ