ಶಿವಮೊಗ್ಗ,ಫೆ.08 : ಯುವ ಕಾಂಗ್ರೆಸ್ ಪದಾಕಾರಿಗಳ ಹುದ್ದೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹರ್ಷಿತ್ ಗೌಡ ಶಿವಮೊಗ್ಗದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ.
ವಿಧಾನಸಭೆ ಕ್ಷೇತ್ರವಾರು, ಬ್ಲಾಕ್ ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯ ದರ್ಶಿ ಹುದ್ದೆಗಳ ಆಯ್ಕೆಗೆ ನಡೆದ ಚುನಾ ವಣೆಯ ಫಲಿತಾಂಶ ಕಳೆದ ರಾತ್ರಿ ಪ್ರಕಟವಾಗಿದೆ.
“ಜಿಲ್ಲಾಧ್ಯಕ್ಷನಾಗಿ ಹರ್ಷಿತ್ ಗೌಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 64,313 ಮತಗಳು ಚಲಾ ವಣೆಯಾಗಿದ್ದವು. ಈ ಪೈಕಿ ಹರ್ಷಿತ್ ಗೌಡ 48,473 ಮತಗಳನ್ನು ಗಳಿಸಿದ್ದಾರೆ. ಹಿಂದಿನ ಅಧ್ಯಕ್ಷ ಹೆಚ್.ಪಿ.ಗಿರೀಶ್ 15,065 , ನಾಗರಾಜ ಜಯಪ್ಪ 441, ಗಿರೀಶ್.ಎನ್ 79 ಮತಗಳನ್ನು ಪಡೆದಿದ್ದಾರೆ.33,408 ಮತಗಳ ಅಂತರದಿಂದ ಹರ್ಷಿತ್ ಗೌಡ ಆಯ್ಕೆಯಾಗಿದ್ದಾರೆ. ಹರ್ಷಿತ್ ಗೌಡ ಯುವ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರಾಗಿದ್ದು, ಹೆಚ್.ಪಿ. ಗಿರೀಶ್, ನಾಗರಾಜ ಜಯಪ್ಪ, ಗಿರೀಶ್. ಎನ್ ಅವರನ್ನು ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಖಾಸಿಫ್ ಖಾನ್, ಆಕಾಶ, ಧನುಷ್.ಎಂ.ಡಿ, ಅಶೋಕ್.ಎಂ, ನಿಖಿಲ್.ಎಸ್.ಸಿ, ಶಿವರಾಜ್.ಎಸ್, ಮೊಹಮ್ಮದ್ ಸಾಜಿದ್, ಶಿವಶಂಕರ.ಎಸ್.ಜಿ, ರೇಷ್ಮಾ.ಎ, ಮೊಹಮ್ಮದ್ ಇರ್ಫಾನ್, ಹರ್ಷಿತಾ ರಾಣಿ ಮಹೇಂದ್ರಕರ್, ಅಬ್ದುಲ್ ಸತ್ತಾರ್ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಕ್ಷೇತ್ರವಾರು ಅಧ್ಯಕ್ಷರ ಆಯ್ಕೆ
ವಿಧಾನಸಭೆ ಕ್ಷೇತ್ರವಾರು ಯುವ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಭದ್ರಾವತಿಗೆ ಮೊಹಮ್ಮದ್ ಶಫಿ, ಸಾಗರಕ್ಕೆ ಮಹೇಂದ್ರ.ಹೆಚ್.ಜಿ, ಶಿಕಾರಿಪುರಕ್ಕೆ ಮಂಜು ನಾಯ್ಕ, ಶಿವಮೊಗ್ಗಕ್ಕೆ ಚರಣ್.ಜೆ, ಶಿವಮೊಗ್ಗ ಗ್ರಾಮಾಂತರಕ್ಕೆ ಪ್ರವೀಣ್ ಕುಮಾರ್.ಎಸ್, ಸೊರಬಕ್ಕೆ ಪ್ರವೀಣ್ ಕುಮಾರ್.ಕೆ.ಪಿ, ತೀರ್ಥಹಳ್ಳಿಗೆ ಪೂರ್ಣೇಶ್.ಜಿ.ಪಿ ಆಯ್ಕೆಯಾಗಿದ್ದಾರೆ.
ಬ್ಲಾಕ್ ಕಾಂಗ್ರೆಸ್‌ಗೂ ನೂತನ ಅಧ್ಯಕ್ಷರು
ಭದ್ರಾವತಿ ಗ್ರಾಮಾಂತರ ಬ್ಲಾಕ್‌ಗೆ ಮುಕ್ಸುದ್ ಅಹಮದ್, ಭದ್ರಾವತಿ ನಗರಕ್ಕೆ ಅಭಿಷೇಕ್.ಜೆ ನೂತನ ಅಧ್ಯಕ್ಷರಾಗಿದ್ದಾರೆ. ಸಾಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಸದ್ದಾಂ ಹುಸೇನ್, ಹೊಸನಗರಕ್ಕೆ ಎಂ.ಎನ್.ವಿಜಯ, ಶಿಕಾರಿಪುರಕ್ಕೆ ಶಿವು.ಹೆಚ್.ಎಂ, ಶಿರಾಳಕೊಪ್ಪಕ್ಕೆ ಮೊಹಮ್ಮದ್ ಅತೀಕ್, ಶಿವಮೊಗ್ಗ ಉತ್ತರಕ್ಕೆ ಗಿರೀಶ್.ಆರ್, ಶಿವಮೊಗ್ಗ ದಕ್ಷಿಣಕ್ಕೆ ಮೊಹಮ್ಮದ್ ಗೌಸ್ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಗ್ರಾಮಾಂತರಕ್ಕೆ ಶಶಿಕುಮಾರ್.ಕೆ, ಹೊಳೆಹೊನ್ನೂರು ಬ್ಲಾಕ್‌ಗೆ ಪ್ರವೀಣ್ ಕುಮಾರ್.ಡಿ.ಟಿ, ಸೊರಬಕ್ಕೆ ಯಶೋದರ ಸಿ.ನಾಯಕ್, ಆನವಟ್ಟಿಗೆ ಹರೀಶ.ಎಂ, ತೀರ್ಥಹಳ್ಳಿ ನಗರಕ್ಕೆ ಶ್ರೇಯಸ್ ಎಸ್.ರಾವ್, ತೀರ್ಥಹಳ್ಳಿ ಗ್ರಾಮಾಂತರಕ್ಕೆ ಬ್ಲಾಕ್‌ಗೆ ರವಿ ಕುಮಾರ್. ಹೆಚ್.ಡಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.