ಶಿವಮೊಗ್ಗ, ಏ.09 : ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಜಿ.ಟಿ.ಸತೀಶ್ ಅವರನ್ನು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಅರ್ಹತೆ, ಯೋಗ್ಯತೆ ಇದ್ದ ಕಾರಣ ಜಿ.ಟಿ.ಸತೀಶ್ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ದೊರೆತಿದೆ, ಅವರ ಪತ್ರಿಕೋದ್ಯಮ ಸೇವೆ ಮುಂದುವರೆಯಲಿ ಎಂದರು.
ಹೊನ್ನಾಳಿ ಚಂದ್ರಶೇಖರ್ ಜಿ.ಟಿ.ಸತೀಶ್ ಬಗ್ಗೆ ಪರಿಚಯ ಮಾಡಿ ಮಾತನಾಡಿ, ಸತೀಶ್ ಮೂಲತಃ ಚಿತ್ರದುರ್ಗದವರಾಗಿದ್ದು, ಮೂರು ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅತ್ಯಂತ ಸೌಲಭ್ಯ ವಂಚಿತರ, ಮಾನವೀಯ ವರದಿಗಳನ್ನು ಮಾಡಿದ್ದಾರೆ. ಇದರ ಆಧಾರದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.1760 ಕಿಮೀ ನಡೆದುಕೊಂಡ ಹೋದ ಕತೆಯನ್ನು ಅನುವಾದ ಮಾಡಿದ್ದಾರೆ. ಅವರ ವರದಿಗಳನ್ನು ನೋಡಿದರೆ ಅವರ ಮನೋಭಾವ ಅರ್ಥವಾಗುತ್ತದೆ ಎಂದರು.
ಪ್ರೆಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಸತೀಶ್ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದ ಜಿ.ಟಿ.ಸತೀಶ್, ಸನ್ಮಾನ ಸ್ವೀಕರಿಸಲು ಮುಜುಗರ ಆಗುತ್ತದೆ. ಸನ್ಮಾನ ಬೇಡ ಎಂದು ಹೇಳಿದರೂ ನನ್ನನ್ನ ಕರೆಸಿ ಸನ್ಮಾನಿಸಿರುವುದು ಖುಷಿ ತಂದಿದೆ ಎಂದರು. ಟ್ರಸ್ಟ್ ಖಜಾಂಚಿ ಜೇಸುದಾಸ್.ಪಿ, ಸಂತೋಷ್ ಕಾಚಿನಕಟ್ಟೆ, ಗಜೇಂದ್ರಸ್ವಾಮಿ, ಗೋಪಾಲ್ ಯಡಗೆರೆ, ಹುಲಿಮನೆ ತಿಮ್ಮಪ್ಪ ಮತ್ತಿತರು ಉಪಸ್ಥಿತರಿದ್ದರು.