ನವದೆಹಲಿ,ಡಿ.12 : 2025 ರ ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿ ಮುಖ್ಯಮಂತ್ರಿ ಅತಿಶಿ ಸರ್ಕಾರವು ಸಚಿವ ಸಂಪುಟ ಸಭೆಯ ನಂತರ ಅರವಿಂದ್ ಕೇಜ್ರಿವಾಲ್ ಅವರ ಗ್ಯಾರಂಟಿಯನ್ನು ಈಡೇರಿಸುವತ್ತ ಒಂದು ಹೆಜ್ಜೆ ಮುಂದಿಟ್ಟಿದೆ. ದೆಹಲಿ ಕ್ಯಾಬಿನೆಟ್ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ ಅನುಮೋದನೆ ನೀಡಿದ್ದು ಅದರಂತೆ ದೆಹಲಿಯ ಮಹಿಳೆಯರು ಪ್ರತಿ ತಿಂಗಳು 1,000 ರೂಪಾಯಿ ಪಡೆಯಲಿದ್ದಾರೆ.
ದೆಹಲಿ ಸಚಿವ ಸಂಪುಟದಿಂದ ಈ ಯೋಜನೆಗೆ ಅನುಮೋದನೆ ಪಡೆದ ನಂತರ, ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಅತಿಶಿ ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಇಂದು ನಾನು ದೆಹಲಿಯ ಜನರಿಗೆ ಎರಡು ದೊಡ್ಡ ಘೋಷಣೆಗಳನ್ನು ಮಾಡಲು ಬಂದಿದ್ದೇನೆ ಎಂದು ಹೇಳಿದರು.
ಎರಡೂ ಘೋಷಣೆಗಳು ಮಹಿಳೆಯರಿಗೆ. ಪ್ರತಿ ಮಹಿಳೆಗೆ 1,000 ರೂ ನೀಡುವುದಾಗಿ ಭರವಸೆ ನೀಡಿದ್ದೆ. ಇಂದು ಬೆಳಗ್ಗೆ ಅತಿಶಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿ ಸಲಾಯಿತು. ಈಗ ಈ ಯೋಜನೆ ದೆಹಲಿಯಲ್ಲಿ ಜಾರಿಯಾಗಿದೆ ಎಂದರು.