ಶಿವಮೊಗ್ಗ, ,ಫೆ. 21 : ಸಮೀಪದ ಉಂಬಳೇಬೈಲು ಬಳಿ ಭೀಕರ ಕಾರು ದುರಂತ ನಡೆದಿದ್ದು, ಪವಾಡ ಸದೃಶವಾಗಿ ವ್ಯಕ್ತಿಯೊಬ್ಬ ಪಾರಾಗಿರುವ ಘಟನೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತರಿಕೆರೆ ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಚೇತನ್ ತಮ್ಮ ಕೆ ಎ 05, ಎನ್ ಬಿ 4547 ನಂಬರಿನ ಫೋರ್ಡ್ ಫಿಗೋ ಕಾರಿನ ಮೂಲಕ ಶಿವಮೊಗ್ಗದಿಂದ ಶೃಂಗೇರಿಯ ಕಡೆ ಫೆ.20 ರಾತ್ರಿ ಹೊರಟಿದ್ದರು.
ತೋಟದಕೆರೆ- ಉಂಬಳೇಬೈಲು ರಸ್ತೆಯಲ್ಲಿ ಹುರುಳಿಹಳ್ಳಿ ಬಳಿ ಸಾಗುವಾಗ ಹಂದಿಯೊಂದು ಅಡ್ಡಬಂದಿದ್ದು, ತಪ್ಪಿಸಲು ಹೋದ ಚೇತನ್ ಎಡಬದಿಯ ಚರಂಡಿಯತ್ತ ಕಾರು ನುಗ್ಗಿಸಿದ್ದಾರೆ.
ನಿಯಂತ್ರಣ ತಪ್ಪಿದ ಕಾರು, ಮರಕ್ಕೆ ಗುದ್ದಿ ಆನಂತರ ವಿದ್ಯುತ್ ಕಂಬಕ್ಕೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ವಿದ್ಯುತ್ ತಂತಿಗಳೆಲ್ಲ ಕಿತ್ತು ಬಂದಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ. ಚಾಲಕ ಚೇತನ್ ಬಚಾವಾಗಿದ್ದಾರೆ. ಈ ಸಂಬಂಧ ಚಾಲಕನ ತಂದೆ ಪಿ.ವಿನಾಯಕ ಬಿನ್ ಲೇಟ್ ಪ್ರಭಾಕರ್ ದೂರು ನೀಡಿದ್ದಾರೆ.