ದಾವಣಗೆರೆ ಬಂದ್‌ಗೆ ಸಂಪೂರ್ಣ ಬೆಂಬಲ

Kranti Deepa

ದಾವಣಗೆರೆ,ಅ.15 : ನಗರದ ಪ್ರತಿಷ್ಠಿತ ಯುಬಿಡಿಟಿ ಕಾಲೇಜು ಖಾಸಗೀಕರಣ ಹಾಗೂ ಶೇಕಡಾ ೫೦ರಷ್ಟು ಪೇಮೆಂಟ್ ಸೀಟ್ ನಿರ್ಧಾರ ವಿರೋಸಿ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಉಳಿ ಸುವ ಸಲುವಾಗಿ ಎಐಡಿಎಸ್‌ಓ ಸಂಘ ಟನೆಯು ಕರೆ ನೀಡಿರುವ ಅಕ್ಟೋಬರ್ 16 ರ ದಾವಣಗೆರೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್ಥಿಕವಾಗಿ ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಬಡವರ ಮಕ್ಕಳ ಪಾಲಿಗೆ ವರದಾನವಾಗಿದ್ದ ಯುಬಿಡಿಟಿ ಕಾಲೇಜು ಉಳಿಸಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಕಳೆದ ೭೩ ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯ ರಿಂಗ್ ಪೂರೈಸಿ ಬದುಕು ಕಟ್ಟಿಕೊಂಡಿ ದ್ದಾರೆ. ಇಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಶುಲ್ಕ ಹೆಚ್ಚಳ ಮಾಡಿ ಪೇಮೆಂಟ್ ಸೀಟ್ ನೀಡಲು ಮುಂದಾಗಿರುವುದು ದುರದೃಷ್ಟಕರ. ಈ ನಿರ್ಧಾರದಿಂದ ಶೈಕ್ಷಣಿಕ ಅಸಮಾನತೆಯೂ ಹೆಚ್ಚು ತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಶುಲ್ಕ ಹಿಂದಿನಂತೆಯೇ ಮುಂದುವರಿ ಸಲು ನಿರ್ಧರಿಸಲಾಗಿದ್ದರೂ, ಪೇಮೆಂಟ್ ಸೀಟ್ ಕೈಬಿಡಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ. ಈಗಾಗಲೇ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸ್ವಾಭಿಮಾನಿ ಬಳಗವೂ ಕೈಜೋಡಿ ಸಲಿದೆ. ವಿದ್ಯಾರ್ಥಿಗಳ ಬೇಡಿಕೆ ಕೂಡಲೇ ಈಡೇರ ಬೇಕು. ಕಾಲೇಜಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಮುಂದಾಗಬೇಕು. ಇರುವ ಸಮಸ್ಯೆಗಳನ್ನು ಪರಿಹರಿಸಬೇಕು. ಬಡವರಿಗಾಗಿ, ಬಡವರಿ ಗೋಸ್ಕರ, ಬಡವರಿಗೆಂದೇ ಇರುವ ಯುಬಿಡಿಟಿ ಕಾಲೇಜಿನ ಉನ್ನತೀಕರಣ ಆಗುವವರೆಗೆ ಎಲ್ಲರೂ ಹೋರಾಡೋಣ. ನಿಮ್ಮೊಂದಿಗೆ ನಾವೂ ಇರುತ್ತೇವೆ ಎಂದು ಜಿ.ಬಿ. ವಿನಯ್ ಕುಮಾರ್ ಧೈರ್ಯ ತುಂಬಿದ್ದಾರೆ.

ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 47,000  ರೂಪಾಯಿ ಇದೆ. ಆದ್ರೆ, ಇಲ್ಲಿ ಪೇಮೆಂಟ್ ಕೋಟಾದಡಿ 97,000 ರೂಪಾಯಿ ಶುಲ್ಕಕ್ಕೆ ಹರಾಜಿಗಿಟ್ಟಿದ್ದು ಖಂಡನೀಯ. ಶಿಕ್ಷಣ ಕಮರ್ಷಿಯಲ್ ಆಗಬಾರದು. ಇರುವ ಒಂದೊಳ್ಳೆ ಕಾಲೇಜಿನಲ್ಲಿಯೂ ಪೇಮೆಂಟ್ ಸೀಟ್ ಬಂದಿದ್ದು ಇಂದಿನ ಶೈಕ್ಷಣಿಕ ಅಧಃಪತನಕ್ಕೆ ಸಾಕ್ಷಿ ಎಂದರೆ ತಪ್ಪಾಗಲಾರದು. ಆದಷ್ಟು ಬೇಗ ಜನಪ್ರತಿನಿಗಳು, ಸಂಬಂಧಪಟ್ಟ ಸಚಿವರು, ಶಿಕ್ಷಣೋದ್ಯಮಿಗಳು ಇತ್ತ ಗಮನ ಹರಿಸಿ ಯುಬಿಡಿಟಿ ಕಾಲೇಜಿನ ಗತವೈಭವ ಮರುಕಳಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಡವರ ಮಕ್ಕಳಿಗಾಗಿರುವ ಎಂಜಿನಿಯರಿಂಗ್ ಕಾಲೇಜು 73 ವರ್ಷ ಪೂರೈಸಿದೆ. ಸದ್ಯದಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಹೊಸ್ತಿ ಲಲ್ಲಿದೆ. ಈ ಕಾಲೇಜಿನ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯಯುತ ಬೇಡಿಕೆ ಈಡೇರಿಸ ಬೇಕು ಎಂದು  ಒತ್ತಾಯಿಸಿದ್ದಾರೆ.

Share This Article
";