ತೀರ್ಥಹಳ್ಳಿ, ಜ.01 : ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಹೋಬಳಿಯ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಕಟ್ಟಿನ ಮಡಿಕೆಯಲ್ಲಿ 31/12/2025 ಬುಧವಾರ ಕಾಡಾನೆ ಪ್ರತ್ಯಕ್ಷ ವಾಗಿದೆ.
ಗಣೇಶ್ ಎಂಬ ರೈತರ ಜಮೀನಿಗೆ ನುಗ್ಗಿ ದಾಂಧಲೆ ನಡೆಸಿದ್ದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಈ ಸಂಬಂಧ ನಾಲೂರು ಗ್ರಾಂ ಪಂ ಸದಸ್ಯ ಸಂದೀಪ್ ಗಾರ್ಡರಗದ್ದೆ ಅರಣ್ಯ ಇಲಾಖೆಯ ವಿರುದ್ಧ ಅಕ್ರೋಶ ಹೊರ ಹಾಕಿದ್ದು ಹೆಚ್ಚಿನ ಅನಾಹುತವಾಗುವ ಮುಂಚೆ ಎಚ್ಚತ್ತುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
