ಇಂದು ಮಲೆನಾಡು ಅಡಿಕೆ ಬೆಳೆಗಾರರ ಸಹಕಾರ ಸಂಘದ ಐದು ವರ್ಷದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚಿಕ್ಕ ಮಗಳೂರಿನ ಮತ್ತು ಶಿವಮೊಗ್ಗದ ಎಲ್ಲ ತಾಲೂ ಕುಗಳು ಮತ್ತು ದಾವಣಗೆರೆಯ ನ್ಯಾಮತಿ, ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳ ಮತದಾರರು ಮತಹಾಕಲಿದ್ದಾರೆ.
17 ವಿಧಾನ ಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ಸೇರಿದಂತೆ 9 ಮತಕೇಂದ್ರಗಳನ್ನು ಆರಂಭಿಸಲಾ ಗಿದೆ. 31 ಸಾವಿರ ಸದಸ್ಯರನ್ನು ಹೊಂದಿರುವ ಮ್ಯಾಮ್ ಕೋಸ್ ನಲ್ಲಿ 11,511 ಸದಸ್ಯರು ಮಾತ್ರ ಮತ ಹಾಕಲು ಅರ್ಹರಾಗಿದ್ದಾರೆ. 39 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
20 ವರ್ಷಗಳಿಂದ ಬಿಜೆಪಿಯ ಬೆಂಬಲಿತ ಸಹಕಾರ ಭಾರತಿ ಮ್ಯಾಮ್‌ಕೋಸ್ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದೆ. ಮತ್ತೊಂದು ಅವಗೆ ಅಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಅದರಂತೆ ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಅಡಿ 19 ಜನ ಅಭ್ಯರ್ಥಿಗಳು ಕಣಕ್ಕಿಳಿಸಿ ಪೈಪೋಟಿ ನೀಡಿದೆ.
ಈ ಬಾರಿ ಹೆಚ್ಚಿನ ತುರುಸು ಕಂಡುಬಂದಿದೆ. ಎರಡೂ ಸಂಘಟನೆಗಳು ಪರಸ್ಪರರ ವಿರುದ್ಧ್ದ ಆರೋಪ, ಪ್ರತ್ಯಾರೋಪ ನಡೆಸಿದ್ದಾರೆ. ಬಿಜೆಪಿ ಮುಖಂಡರ ನೇತೃತ್ವದಲ್ಲಿ ಕಳೆದ ವಾರ ಸಾಗರದಲ್ಲಿ ಅಡಕೆ ಬೆಳೇಗಾರರ ಸಮ್ಮೇಳನವನ್ನು ನಡೆಸಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರೆಯಿಸಲಾಗಿತ್ತು.
ಕಾಂಗ್ರೆಸ್ ನಾಯಕರು ಅದಕ್ಕೆ ಪ್ರತಿಯಾಗಿ 4-5 ಪತ್ರಿಕಾಗೋಷ್ಟಿಗಳನ್ನು ಮಾಡಿ ಅಡಿಕೆ ಬೆಳೆಯ ಬಗ್ಗೆ ಬಿಜೆಪಿ ಹೊಂದಿರುವ ವಿಚಾರಧಾರೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಾರೆ. ಬಿಜೆಪಿಗೆ ಪ್ರತಿ ಚುನಾವಣೆ ಬಂದಾಗ ಮಾತ್ರ ಅಡಿಕೆ ಬೆಳೆಗಾರರು ಮತ್ತು ಅಡಿಕೆ ನೆನೆಪಾಗುತ್ತದೆ. ಅಮಿತ್ ಶಾ ಸುಳ್ಳು ಭರವಸೆ ಕೊಟ್ಟು ಹೋಗಿ 10 ವರ್ಷವಾದರೂ ಇದು ಇನ್ನೂ ಇಲ್ಲಿನವರನ್ನು ಕಾಡುತ್ತಿದೆ.
ಈ ಬಾರಿ ಬಜೆಟ್ಟಿನಲ್ಲಿ ಅಡಿಕೆ ಬಗ್ಗೆ ಪ್ರಸ್ತಾಪವಿಲ್ಲದಿರುವುದು, ರೈತರನ್ನು ಕನಿಷ್ಟ ವಾಗಿ ಕಾಣುವುದು, ರೋಗಕ್ಕೆ ಪರಿಹಾರ ಕಂಡುಹಿಡಿಯ ದಿರುವುದು ಚರ್ಚೆಯ ಮುಖ್ಯ ವಿಷಯಗಳಾಗಿವೆ.
ಸಹಕಾರ ಭಾರತಿ ಪರ ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ರಾಷ್ಟ್ರೀಯ ಸಹಕಾರಿ ಪರ ಸಚಿವ ಮಧು ಬಂಗಾರಪ್ಪ ಹಲವೆಡೆ ಸಭೆ ನಡೆಸಿದ್ದಾರೆ. ಜೊತೆಗೆ ಪ್ರತಿ ತಾಲೂಕಿಗೆ ವೀಕ್ಷಕರನ್ನು ನೇಮಿಸಿದ್ದಾರೆ.
ಮುಖಂಡ ರಮೇಶ್ ಹೆಗಡೆ ಹೆಚ್ಚು ಬಿಜೆಪಿಯ ಅಡಿಕೆ ನೀತಿಯನ್ನು ಬಿಚ್ಚಿಡುತ್ತಿದ್ದಾರೆ. ಆರ್ ಎಂ ಮಂಜುನಾಥ ಗೌಡ, ಡಿಸಿಸಿ ಅಧ್ಯಕ್ಷ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ ಮೊದ ಲಾದವರು ಪತ್ರಿಕಾಗೋಷ್ಟಿ ನಡೆಸಿ ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಹೆಚ್ಚಿನ ಸಂಘಟನೆಯನ್ನು ಈ ಬಾರಿ ಕಾಂಗ್ರೆಸ್ ಮಾಡಿ ರುವುದು, ಗೆಲ್ಲಲು ಎಲ್ಲೆಡೆ ಸಭೆ ನಡೆಸಿ ರೈತರನ್ನು ತಲುಪುತ್ತಿರುವುದು ಅದಕ್ಕೆ ಹೆಚ್ಚಿನ ಬಲವನ್ನು ತಂದುಕೊಟ್ಟಿದೆ.
ಅಡಿಕೆ ಕ್ಯಾನರ್‌ಕಾರಕ ಎನ್ನುವ ವಿಚಾರ ಹೆಚ್ಚು ಬೆಂಕಿಯನ್ನು ಈ ಬಾರಿ ಹೊತ್ತಿಸಿದೆ. ಜೊತೆಗೆ ವಿದೇಶದಿಂದ ಅಡಿಕೆ ಆಮದು ಮಾಡಿ ಕೊಳ್ಳುತ್ತಿರುವುದರಿಂದ ಇಲ್ಲಿನ ಅಡಿಕೆ ಮಾರು ಕಟ್ಟೆ ದರ ಕುಸಿತ, ಅಡಿಕೆ ಮಂಡಳಿ ಸ್ಥಾಪನೆಗೆ ಬಿಜೆಪಿ ವಿರೋಧವೆಲ್ಲ ಅದಕ್ಕೆ ತಿರುಗುಬಾಣವಾಗುವ ಸಾಧ್ಯತೆ ಕಂಡುಬರುತ್ತಿದೆ. ಕೇಂದ್ರ ಕೃಷಿ ಸಚಿವರು ಬಂದರೂ ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವುದನ್ನು ಹೇಳಿಲ್ಲ. ಇದೂ ಕೂಡ ಈ ಬಾರಿ ಕಣದಲ್ಲಿ ಪ್ರತಿಧ್ವನಿಸುತ್ತಿದೆ.
ಕಣದಲ್ಲಿರುವವರು:
ಕಣದಲ್ಲಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಪರ ಕಾಂಗ್ರೆಸ್ ಮುಖಂಡ, ಹೋರಾಟಗಾರ ತೀರ್ಥ್ಹಹಳ್ಳಿಯ ಕಡ್ತೂರು ದಿನೇಶ್ ಮುಂದಾಳ ತನ ವಹಿಸಿದ್ದಾರೆ. ಇವರು ಮ್ಯಾಮ್‌ಕೋಸ್‌ನಿಂದಾದ ತೊಂದರೆ, ರೈತರಿಗೆ ಸಿಗದ ನೆರವು ಮುಂತಾದವುಗಳನ್ನು ಮೊದಲಿನಿಂದಲೂ ಎತ್ತಿ ಹೇಳುತ್ತಾ ಬಂದವರು. ಇವರೊಟ್ಟಿಗೆ ಜಿಪಂ ಮಾಜಿ ಸದಸ್ಯ ಪದ್ಮನಾಭ, ವರ್ತೇಶ್, ಪ್ರಗತಿಪರ ರೈತ ದುಮ್ಮಳ್ಳಿ ರಘು, ತರಿಕೆರೆಯ ವಕೀಲ ಮತ್ತು ಸಹಕಾರಿ ಧುರೀಣ ದಯಾನಂದ, ಸಾಗ ರದ ಹಿರಿಯ ಸಹಕಾರಿ ಧುರೀಣ ಸುಬ್ಬರಾವ್, ಶಿರಾಳಕೊಪ್ಪದ ರಮೇಶ್ ಬಳ್ಳಿಗಾವಿ ಸಹಿತ ೧೯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಹಕಾರ ಭಾರತಿಯಲ್ಲಿ ಹಾಲಿ ಅಧ್ಯಕ್ಷ ಮಹೇಶ್ ಹುಲ್ಕುಳಿ ನೇತೃತ್ವದ ತಂಡ ರಚಿಸಲಾಗಿದೆ. ಅವರಲ್ಲಿ ಬಹುತೇಕರು ಹಾಲಿ ನಿರ್ದೇಶಕರೇ ಕಣದಲ್ಲಿದ್ದಾರೆ.
ಫೆ. 4 ಕ್ಕೆ ಚುನಾವಣೆ ನಡೆಯಲಿದೆ. ಸಂಜೆಯೇ ಮತಪೆಟ್ಟಿಗೆ ತಂದ ನಂತರ ಶಿವಮೊಗ್ಗದಲ್ಲಿ ಮತ ಎಣಿಕೆ ನಡೆಯಲಿದೆ. ಎಪಿಎಂಸಿಯಲ್ಲಿರುವ ಮ್ಯಾಮ್ ಕೋಸ್‌ನಲ್ಲಿ ಮತ ಎಣಿಕೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಚುನಾವಣಾಕಾರಿ ರವಿಚಂದ್ರ ನಾಯಕ್ ನೇತೃತ್ವ್ವದಲ್ಲಿ ಮಾಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ೯ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ೧೯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಮಧ್ಯರಾತ್ರಿ ವೇಳೆ ಫಲಿತಾಂಶ ಪ್ರಕಟವಾಗಲಿದೆ.