ಪದವಿ ಶುಲ್ಕ ಪರಿಷ್ಕರಣೆ ಆದೇಶ ಹಿಂಪಡೆಯಲು ಡಾ|| ಸರ್ಜಿ ಆಗ್ರಹ

Kranti Deepa

ಬೆಳಗಾವಿ,ಡಿ.13 :ಗೊಂದಲಮಯವಾದ ಹಾಗೂ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣ ವಾದ ಶುಲ್ಕಪರಿಷ್ಕರಣೆ ಆದೇಶವನ್ನು ವಿಳಂಬ ಮಾಡದೇ ವಾಪಾಸು ಪಡೆದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ವಿಧಾನ ಪರಿಷತ್ ಶಾಸಕ ಡಾ|| ಧನಂಜಯ ಸರ್ಜಿ ಸರ್ಕಾರವನ್ನು ಆಗ್ರಹಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರವೇಶಾತಿ ಮುಗಿದ ನಂತರ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡಿರುವುದು ಕಾಲೇಜು ಶಿಕ್ಷಣ ಇಲಾಖೆಯ ಬೇಜಾವಾಬ್ದಾರಿತನವಾಗಿದೆ ಎಂದು ಟೀಕಿಸಿದರು.

2023-24  ನೇ ಸಾಲಿನದ್ದ ಶುಲ್ಕವನ್ನೇ 2024-25 ನೇ ಸಾಲಿಗೂ ಮುಂದುವರಿಸುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಆದೇಶ ಹೊರಡಿಸಿದ ಒಂದೂವರೆ ತಿಂಗಳಲ್ಲಿಯೇ ಬೋಧನ ಶುಲ್ಕ, ಪ್ರಯೋಗಾಲಯ, ಕಾಲೇಜು ಅಭಿವೃದ್ದಿ ಶುಲ್ಕ ಸೇರಿ ಇತರ ಶುಲ್ಕಗಳನ್ನೂ ಪರಿ ಷ್ಕರಣೆ ಮಾಡಿದೆ. ಈಗಾಗಲೇ ರಾಜ್ಯಾದ್ಯಂತ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಪ್ರವೆಶಾತಿ ಪ್ರಕ್ರಿ ಯೆಯು ಕಳೆದ ಕ್ಟೋಬರ್, ನವೆಂಬರ್ ತಿಂಗಳಲ್ಲಿಯೇ ಬಹುತೇಕ ಮುಗಿದಿದ್ದು, ತರಗತಿಗಳು ಆರಂಭವಾಗಿವೆ.

ಆದರೆ, ಈಗ ಕಾಲೇಜು ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವುದು ಬಹುತೇಕ ಆರ್ಥಿಕ ಬಡ ವಿದ್ಯಾರ್ಥಿಗಳೇ ಹೆಚ್ಚಿರುವ ಸರ್ಕಾರಿ ಕಾಲೇಜುಗಳಲ್ಲಿ ಮತ್ತೊಮ್ಮೆ ಹೆಚ್ಚುವರಿ ಶುಲ್ಕ ಪಾವತಿಸಬೇಕೆಂಬುದು ಬಡ ವಿದ್ಯಾರ್ಥಿ ಗಳಿಗೆ ಆತಂಕವನ್ನು ಉಂಟು ಮಾಡಿದೆ. ಆದ್ದರಿಂದ ಸರ್ಕಾರ ಶುಲ್ಕ ಏರಿಕೆಯ ಆದೇಶವನ್ನು ಹಿಂಪಡೆಯಬೇಕು ಎಂದರು.

ಕಾಲೇಜು ಶಿಕ್ಷಣ ಇಲಾಖೆ ಮತ್ತು ಸರ್ಕಾರ ನವೆಂಬರ್ 7 ಮತ್ತು 8 ರಂದು ಸರ್ಕಾರ ಮತ್ತು ಆಯಕ್ತಾಲಯದ ಹಂತದಲ್ಲಿ ಶುಲ್ಕ ಪರಿಷ್ಕರಣೆ ಆದೇಶ ಆಗಿದ್ದರೂ ಆದೇಶವನ್ನು ಮುಚ್ಚಿಟ್ಟು ಶೈಕ್ಷಣಿಕ  ವರ್ಷದ ಮಧ್ಯದಲ್ಲಿ ತರಗತಿ ಆರಂಭವಾದ ನಂತರ ಪ್ರಕಟಿಸಿರುವುದು ಅನುಮಾನವನ್ನು ಹುಟ್ಟಿಸುತ್ತಿದೆ. ಗೊಂದಲಮಯವಾದ ಹಾಗೂ ಬಡ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾದ ಶುಲ್ಕಪರಿಷ್ಕರಣೆ ಆದೇಶವನ್ನು ವಿಳಂಬ ಮಾಡದೇ ವಾಪಾಸು ಪಡೆದು ವಿದ್ಯಾರ್ಥಿಗಳ ಹಿತ ಕಾಪಾಡುವಂತೆ ಆಗ್ರಹಿಸಿದರು.

Share This Article
";