ಬೆಂಗಳೂರು,ಆ.09 : ರೈಲು ಪ್ರಯಾಣಿಕರಿಗೆ ರೈಲ್ವೆ ಸಚಿವಾಲಯ ಸಿಹಿ ಸುದ್ದಿಯೊಂದನ್ನು ನೀಡಿದೆ, ಹೋಗಿ ಬರುವ ಎರಡೂ ಟಿಕೆಟ್ ಅನ್ನು (ರೌಂಡ್ ಟ್ರಿಪ್) ಒಟ್ಟಿಗೆ ಮುಂಗಡ ಕಾಯ್ಡಿರಿಸುವ ಪ್ರಯಾಣಿಕರಿಗೆ ಪ್ರಯಾಣ ದರದ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಿದೆ.
ಈ ಕೊಡುಗೆ ಇದೇ ಅಕ್ಟೋಬರ್ 13 ರಿಂದ 26 ರೊಳಗಿನ ಪ್ರಯಾಣ ಹಾಗೂ ನವೆಂಬರ್ 17 ರಿಂದ ಡಿಸೆಂಬರ್ 1 ರೊಳಗಿನ ಪ್ರಯಾಣದ ಬುಕಿಂಗ್ ಮೇಲೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.ಈ ರಿಯಾಯಿತಿ ಸೌಲಭ್ಯದ ಬುಕಿಂಗ್ ಆಗಸ್ಟ್ 14 ರಿಂದ ಪ್ರಾರಂಭವಾಗುತ್ತದೆ.