ಧರ್ಮಸ್ಥಳ ಪ್ರಕರಣ: ಶಿವಮೊಗ್ಗ ಜೈಲಿನಿಂದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಿಡುಗಡೆ

Kranti Deepa

ಶಿವಮೊಗ್ಗ: ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ಎಸ್‌ಐಟಿ ತನಿಖೆ ನಡೆಯುವಂತೆ ಮಾಡಿ, ಬಳಿಕ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆ ಮಾಡಲಾಗಿದೆ.

ಚಿನ್ನಯ್ಯನಿಗೆ ನವೆಂಬರ್ 24 ರಂದು ಬೆಳ್ತಂಗಡಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಚಿನ್ನಯ್ಯ ಕೋರ್ಟ್? ಆದೇಶದಂತೆ ವೈಯಕ್ತಿಕ ಬಾಂಡ್ ಹಾಗೂ ಇತರೆ ಅಂಶಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ, ಜಾಮೀನು ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು.

ಹೀಗಾಗಿ ಆತ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿಯೇ ಇದ್ದ. ಚಿನ್ನಯ್ಯನ ಪತ್ನಿ ಮಲ್ಲಿಕಾ ಬೆಳ್ತಂಗಡಿ ನ್ಯಾಯಾಲಯದಲ್ಲಿ ಬುಧವಾರ ಜಾಮೀನು ಪ್ರಕ್ರಿಯೆ ಮುಗಿಸಿದ ಬಳಿಕ ಗುರುವಾರ ಬೆಳಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾನೆ. ಚಿನ್ನಯ್ಯನ ಪತ್ನಿ ಮಲ್ಲಿಕಾ, ಆತನ ಸಹೋದರಿ, ಸಹೋದರಿಯ ಗಂಡ, ವಕೀಲರ ಕಾರಿನ ಚಾಲಕ ಜೈಲಿನ ಬಳಿ ಆತನನ್ನು ಕರೆದೊಯ್ಯಲು ಆಗಮಿಸಿದ್ದರು.

ಬುಧವಾರ ಸಂಜೆಯೇ ಕಾರಾಗೃಹಕ್ಕೆ ಕೋರ್ಟ್ ಆದೇಶ ಬಂದಿತ್ತು. ಇದರಿಂದ ಬೆಳಗ್ಗೆ ಜೈಲಿನಿಂದ ಚಿನ್ನಯ್ಯ ಬಿಡುಗಡೆ ಆಗಿದ್ದಾನೆ. ಈತ ಪ್ರತಿ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು ಬೆಳ್ತಂಗಡಿ ನ್ಯಾಯಾಲಯವು  ವಿಧಿಸಿದೆ.

Share This Article
";