ತೀರ್ಥಹಳ್ಳಿ: ಬೈಕ್ ಚಾಲನೆ ಮಾಡುವಾಗ ಯುವಕನೊಬ್ಬ ಹೃದಯಾಘಾತಕ್ಕೆ ಒಳಗಾಗಿ ಬೈಕ್ ನಿಂದ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಹೊದಲ-ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ನೆಲ್ಲಿಸರ-ವಡ್ಡಿನಬೈಲು ಮುಖ್ಯರಸ್ತೆಯಲ್ಲಿ ವರದಿಯಾಗಿದೆ.
ಮೃತ ಯುವಕ ರಂಜದಕಟ್ಟೆಯ ಸಂತೋಷ್ (32 ) ಎಂದು ಗುರುತಿಸಲಾಗಿದೆ.ಹೊದಲ ಸಮೀಪದ ಹೊಸಗದ್ದೆಯ ಮಾವನ ಮನೆಗೆ ಹೋಗಿ ಬರುವಾಗ ಹೊದಲ ವೃತ್ತದ ಸಮೀಪದ ಹೊಟೇಲ್ ಗೆ ತೆರಳಿ ಎದೆನೋವು ಬರುತ್ತಿದೆ ಎಂದಿದ್ದಾನೆ.
ತಕ್ಷಣವೇ ಅಲ್ಲಿನ ಯಾರ ಮಾತು ಕೇಳದೆ ತೀರ್ಥಹಳ್ಳಿಗೆ ಬೈಕ್ನಲ್ಲಿ ತೆರಳುವಾಗ ಮಾರ್ಗ ಮಧ್ಯದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಬೈಕ್ನಿಂದ ರಸ್ತೆ ಪಕ್ಕದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.