ಬೆಂಗಳೂರು,ಫೆ.08 : ಕಳೆದ 8 ತಿಂಗಳ ಹಿಂದೆ ನಡೆದ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಆರೋಪಿ ಅಗಿರುವ ನಟ ದರ್ಶನ್ ಅವರು 8 ತಿಂಗಳ ಬಳಿಕ ತನ್ನ ಅಭಿಮಾನಿಗಳಿಗೋಸ್ಕರ ಮಾತನಾಡಿದ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಎಲ್ಲಾ ಸೆಲೆಬ್ರಿಟಿಗಳಿಗೆ ತುಂಬಾ ಹೃದಯದ ಧನ್ಯವಾದಗಳು.ನನ್ನ ಕಷ್ಟದ ಕಾಲದಲ್ಲಿ ನನ್ನ ಜೊತೆ ಇದ್ದಿರಿ.ನನಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದ್ದಿರಿ,ಹೀಗೆ ನಿಮ್ಮ ಪ್ರೀತಿ ಮತ್ತು ಸಹಕಾರ ಸದಾ ಕಾಲ ನನ್ನ ಮೇಲೆ ಇರಲ್ಲಿ.
ಹಾಗೆಯೇ ಈ ವರ್ಷದ ನನ್ನ ಹುಟ್ಟು ಹಬ್ಬದಂದು ನಾನು ನಿಮಗೆ ಭೇಟಿ ಆಗಲು ಆಗುವುದಿಲ್ಲ.ನನ್ನ ಆರೋಗ್ಯದ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳಲು ಆಗುವುದಿಲ್ಲ.ಹಾಗಾಗಿ ನನ್ನ ಎಲ್ಲಾ ಸೆಲೆಬ್ರಿಟಿಗಳಿಗೆ ಕ್ಷಮೆ ಕೋರುತ್ತೇನೆ ಎಂದು ನಟ ದರ್ಶನ್ ಅವರು ವಿಡಿಯೋ ಮೂಲಕ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಮುಂದೆ ಮಾತನಾಡುತ್ತ ನಾನು ಮತ್ತು ನಿರ್ದೇಶಕ ಪ್ರೇಮ್ ಸೇರಿ ಖಂಡಿತವಾಗಿ ಸಿನಿಮಾ ಮಾಡುತ್ತೇವೆ ಎಂದು ಸಹ ಹೇಳಿದ್ದಾರೆ.
ಈ ಮುಖಾಂತರ 3 ಜನರಿಗೆ ಧನ್ಯವಾದಗಳು ಹೇಳಬೇಕು.ನಟ ಧನ್ವೀರ್ ಅವರಿಗೆ ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆಗೆ ಇದ್ದು ನನ್ನ ಬೆನ್ನೆಲುಬಾಗಿ ಇದ್ದರು ಎಂದಿದ್ದಾರೆ.ಹಾಗೇ ರಚಿತರಾಮ್ ಮತ್ತು ರಕ್ಷಿತ ಪ್ರೇಮ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ಸೆಲೆಬ್ರಿಟಿಗಳೀಗೆ ಖಂಡಿತ ಭೇಟಿ ಮಾಡುತ್ತೇನೆ.ಹಾಗೇ ಮತ್ತೆ ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತೋಮ್ಮೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.