ಜೈಲಿಂದ ಹೊರಬಂದ ದರ್ಶನ್

Kranti Deepa
ಬಳ್ಳಾರಿ,ಅ.30 :ರೇಣುಕಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಬುಧವಾರ ಸಂಜೆ ಬಿಡುಗಡೆ ಯಾಗಿ, ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದರು.
ಬಿಡುಡೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆ ಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕೆಲಸಗಾರರು ದರ್ಶನ್ ಕಾರನ್ನು ಸುಚಿಗೊಳಿ ಸಿದರು. ಅಭಿಮಾನಿಗಳು ಮನೆಯ ಮುಂದೆ ಗುಂಪುಗೂಡಿ, ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡಿದರು.
ತಮ್ಮನ್ನು ಇರಿಸಿದ್ದ ಹೊರ ವಿಶೇಷ ಭದ್ರತಾ ಕೊಠಡಿಯಿಂದ ಹೊರ ಬಂದ ದರ್ಶನ್ ಜೈಲು ಕಚೇರಿಗೆ ತೆರಳಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಸರಿಯಾಗಿ ಸಂಜೆ 6.05 ಕ್ಕೆ ಅವರು ಜೈಲು ಕಚೇರಿಯಿಂದ ಹೊರಬಂದರು.
ಹೀಗೆ ಬರುವ ವೇಳೆ ಅವರು ಕುಂಟುತ್ತಿದ್ದದ್ದು, ತಮ್ಮ ಸಂಬಂಯ ಸಹಾಯ ಪಡೆಯುತ್ತಿದ್ದು ಕಂಡುಬಂತು. ಜೈಲಿನಿಂದ ಹೊರ ಬಂದ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕಾರಿಗೆ ಹತ್ತಿಸಿದರು.
ಈ ವೇಳೆ ಸ್ಥಳದಲ್ಲಿ ಸೇರಿದ್ದ ಅಭಿಮಾನಿಗಳು ‘ಬಾಸ್ ಬಾಸ್ ಡಿ ಬಾಸ್’ ಎಂದು ಕೂಗಿದರು.  ನಗರದ ಎಸ್‌ಪಿ ಸರ್ಕಲ್ ಮಾರ್ಗವಾಗಿ ಮತ್ತೆ ಅನಂತಪುರ ರಸ್ತೆಗೆ ಬಂದ ದರ್ಶನ್ ಅವರಿದ್ದ ಕಾರು, ರಾಜ್ಯದ ಗಡಿ ಗ್ರಾಮ ಚೇಳ್ಳಗುರ್ಕಿ ಮೂಲಕ ಅನಂತಪುರ ತಲುಪಿ ಅಲ್ಲಿಂದ ಬೆಂಗಳೂರಿಗೆ ತೆರಳಿತು. ರಾಜ್ಯದ ಗಡಿ ವರೆಗಿನ 25 ಕಿ.ಮೀ ಮಾರ್ಗದಲ್ಲಿ ದರ್ಶನ್‌ಗೆ ಬಳ್ಳಾರಿ ಪೊಲೀಸರ ಭದ್ರತೆ ಸಿಗಲಿದೆ.
ಆಗಸ್ಟ್ 29 ರಂದು ದರ್ಶನ್ ಬಳ್ಳಾರಿ ಜೈಲು ಸೇರಿದ್ದರು. ಸರಿಯಾಗಿ ಎರಡು ತಿಂಗಳಿಗೆ ಅವರ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ಅವರು ತಮ್ಮ ಪಿಪಿಸಿ ರೂ.35 ಸಾವಿರ ಬಿಡಿಸಿಕೊಂಡಿದ್ದಾರೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ
ನ್ಯಾಯಾಂಗ ಮತ್ತು ಪೊಲೀಸರ ಮೇಲೆ ನಮಗೆ ನಂಬಿಕೆ ಇದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಕಾನೂನು ವ್ಯವಸ್ಥೆಯಲ್ಲಿ ಜಾಮೀನು ನೀಡಲಾಗಿದೆ. ಅದರ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ನಮಗಿದೆ. ನಮಗೆ ಕಾನೂನು ಮತ್ತು ಪೊಲೀಸರ ಮೇಲೆ ನಂಬಿಕೆ ಇದೆ. ದರ್ಶನ್ ಗೆ ಜಾಮೀನು ವೈದ್ಯರು ಮತ್ತು ನ್ಯಾಯಾಲಯದ ವಿಷಯವಾಗಿದೆ. ಈ ಬಗ್ಗೆ ನಾವು ಪ್ರತಿಕ್ರಿಯಿಸಲು ಬಯಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುವುದನ್ನು ಬಿಟ್ಟು ಬೇರೆ ಏನನ್ನೂ ಹೇಳುವುದಿಲ್ಲ.
– ರೇಣುಕಾಸ್ವಾಮಿ ತಂದೆ

Share This Article
";