ಗ್ಯಾರೇಜಿಗೆ ಬೆಂಕಿ:ಆರು ಕಾರುಗಳಿಗೆ ಹಾನಿ

Kranti Deepa

ಶಿವಮೊಗ್ಗ,ಆ.11 : ನಗರದ  ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಮನು ಶೆಟ್ಟಿ  ಅವರ ಆಟೋ ವರ್ಕ್ಸ್‌ನಲ್ಲಿ  ಬೆಂಕಿ ಅವಘಡ ಸಂಭವಿಸಿ ೪ ಕಾರುಗಳು ಸಂಪೂರ್ಣ ಕರಕಲಾಗಿದ್ದು ಅಲ್ಲದೇ ಸುಮಾರು 13 ರಿಂದ 15 ಲಕ್ಷ ರೂ. ಮೌಲ್ಯದ ಆಟೋಮೊಬೈಲ್ ಉಪಕರಣಗಳು ವಿದ್ಯು ತ್ ಅವಘಡದಿಂದ  ಉಂಟಾದ ಬೆಂಕಿಗೆ ಆಹುತಿಯಾಗಿದೆ.

ಘಟನೆಯಲ್ಲಿ ಇಕೋ ಸ್ಪೋರ್ಟ್ಸ್ ,ಡಸ್ಟರ್ ,ಟಾಟಾ ಸುಮೊ ಕಾರುಗಳು ಸಂಪೂರ್ಣ ಸುಟ್ಟು ಹೋಗಿದ್ದು , ಇಂಡಿಗೋ ಕಾರು ಭಾಗಶಃ ಸುಟ್ಟಿದೆ.ಇದಲ್ಲದೆ ಆಯಿಲ್ ,ಬಿಡಿ ಭಾಗಗಳು ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಗ್ಯಾರೇಜ್‌ನಲ್ಲಿ  ದಟ್ಟ ಹೊಗೆ ಕಾಣಿಸಿಕೊಂಡಿತ್ತು.

ರಜಾ ದಿನವಾದ್ದರಿಂದ ಗ್ಯಾರೇಜ್ ತೆರೆದಿರರಲಿಲ್ಲ. ನಂತರ ಇದನ್ನು ಕಂಡವರು ಸಂಬಂತರಿಗೆ ಮಾಹಿತಿ ನೀಡಿದ್ದರು. ಕೂಡ ಲೇ  ಬೆಂಕಿಯನ್ನು ಆರಿಸಲು ಅಗ್ನಿಶಾಮ ಕದಳಕ್ಕೆ ಕರೆ ನೀಡಲಾಗಿತ್ತು. ಅವರು ಧಾವಿಸಿ   ಬೆಂಕಿ ನಂದಿಸಲು ಯತ್ನಿಸಿ ದರಾದರೂ ಕಾರು ಗಳು ಒಳಗಡೆ ಇದ್ದುದರಿಂದ ಸುಟ್ಟು ಹೋಗಿವೆ.  ಮಾಹಿತಿ ಪಡೆದ ಮೇಲೆ ಗ್ಯಾರೇ ಜ್  ಮಾಲೀಕರು ಸಹ ಸ್ಥಳಕ್ಕೆ ಧಾವಿಸಿದ್ದರು.ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";