ಶಿವಮೊಗ್ಗ,ಡಿ.2 : ಬಸವ ಕೇಂದ್ರದ ಶ್ರೀ ಬಸವತತ್ವ ಪೀಠಾಶ ಶ್ರೀ ಡಾ. ಬಸವಮರುಳಸಿದ್ಧ ಸ್ವಾಮೀಜಿ ಅವರಿಗೆ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಮತ್ತು ಬಹಿರಂಗ ಅವೇಶನವನ್ನು ಡಿ.೫ರಂದು ನಗರ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಿನ್ಮಯಾನು ಗ್ರಹ ದೀಕ್ಷಾ ಸಮಾರಂಭದ ಕಾರ್ಯಕಾರಿ ಸಮಿತಿ ಪ್ರಮುಖ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವೆಂಕಟೇಶನಗರದ ಬಸವ ಕೇಂದ್ರದಲ್ಲಿ ಶ್ರೀಗಳಿಗೆ ಬೆಳಿಗ್ಗೆ 5 ಕ್ಕೆ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರು ಲಿಂಗ ಹಸ್ತದಿಂದ ಅನುಗ್ರಹಿಸುವರು ಎಂದರು.
ಅಂದು ಬೆಳಗ್ಗೆ 11 ಕ್ಕೆ ಮಾಚೇನಹಳ್ಳಿ ಡೈರಿ ಬಳಿ ಬಸವ ನೆಲೆಯಲ್ಲಿ ಬಹಿರಂಗ ಅವೇಶನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯರಪ್ಪ ಉದ್ಘಾಟಿ ಸುವರು. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಅತಿಥಿಗಳಾಗಿದ್ದು ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ವಿಶೇಷ ಉಪನ್ಯಾಸ ನೀಡುವರು ಎಂದರು.
ಬೆಕ್ಕಿನ ಕಲ್ಮಠದ ಸ್ವಾಮೀಜಿ, ನಿಟ್ಟೂರು ಶ್ರೀ ಬಹ್ಮಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಕಡೂರು ಯಳ ನಾಡು ಮಠದ ಶ್ರೀ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ನಾಡಿನ ಹಲವು ಸ್ವಾಮೀಜಿಗಳು, ಮಠಾಶರ ಸಮ್ಮುಖ ವಹಿಸುವರು. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಎಲ್ಲ ಶಾಸಕರು, ಎಂಎಲ್‌ಸಿಗಳು, ಅಕಾರಿಗಳು ಪಾಲ್ಗೊಳ್ಳುವರು ಎಂದು ಹೇಳಿದರು.
ಎಂಎಲ್‌ಸಿ ಡಾ|| ಧನಂಜಯ ಸರ್ಜಿ, ಎಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಕಿರಣ್‌ಕುಮಾರ್, ವಿಜಯಕುಮಾರ್, ಬಾಳೆಕಾಯಿ ಮೋಹನ್, ಜಗದೀಶ್ ಉಪಸ್ಥಿತರಿದ್ದರು.