ಡಿ. 21: ಕುವೆಂಪು ವಿವಿಯಲ್ಲಿ ಕವಿ-ಕಾವ್ಯ ಸಮ್ಮೇಳನ: ಕೊಟ್ರೇಶ್ ಉಪ್ಪಾರ್

module:31facing:0; ?hw-remosaic: 0; ?touch: (-1.0, -1.0); ?modeInfo: Beauty ; ?sceneMode: 32768; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:31facing:0; hw-remosaic: 0; touch: (-1.0, -1.0); modeInfo: Beauty ; sceneMode: 32768; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Kranti Deepa

ಶಿವಮೊಗ್ಗ್ಗ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಕುವೆಂಪು ವಿಶ್ವವಿದ್ಯಾಲಯ ಸಹಯೋಗದಲ್ಲಿ ಡಿ. 21  ಭಾನುವಾರ ಕುವೆಂಪು  ವಿಶ್ವವಿದ್ಯಾಲಯದ ಬಸವ ಭವನದಲ್ಲಿ “ಅಖಿಲ ಕರ್ನಾಟಕ ಐದನೆಯ ಕವಿಕಾವ್ಯ ಸಮ್ಮೇಳನವನ್ನು ” ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್  ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು,  ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ ಸಮ್ಮೇಳನ ಅಧ್ಯಕ್ಷತೆ ವಹಿಸುವರು. ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸಮ್ಮೇಳನ ಉದ್ಘಾಟಿಸುವರು. ನಾಡಿನ ಹೆಸರಾಂತ ಸಾಹಿತಿ, ಬಸವಾನುಯಾಯಿ ರಂಜಾನ್ ದರ್ಗಾ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾಧ್ಯಕ್ಷೆ ಪ್ರೊ. ಹಸೀನಾ ಎಚ್.ಕೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಜಾಜಿ ದೇವೇಂದ್ರಪ್ಪ,  ಸಾಹಿತಿ ಶೈಲಾ ನಾಗರಾಜ್ ಅತಿಥಿಯಾಗಿರುವರು ಎಂದರು.

ಮಧ್ಯಾಹ್ನದ ಅವಧಿಯಲ್ಲಿ ಸಮ್ಮೇಳನದಲ್ಲಿ ಮೂರು ಸಮಾನಾಂತರ ವೇದಿಕೆಯಲ್ಲಿ ಏಕಕಾಲದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಮೊದಲ ಕವಿಗೋಷ್ಟಿಗೆ ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ  ಕಾವ್ಯಶ್ರೀ ಜಿ.,ಎರಡನೆಯ ಕವಿಗೋಷ್ಠಿಗೆ  ಸಾಹಿತಿ ಎನ್. ಶೈಲಜಾ ಹಾಸನ,  ಮೂರನೆಯ ಕವಿಗೋಷ್ಠಿಗೆ ಸಿದ್ದರಾಮ ಹೊನ್ಕಲ್ ಅಧ್ಯಕ್ಷತೆ  ವಹಿಸುವರು. ಇದರಲ್ಲಿ  ವಿವಿಧ ಜಿಲ್ಲೆಯ ಸಾಹಿತಿ, ಸಂಘಟಕರು, ಸಾಧಕರು ಮುಖ್ಯ ಅತಿಥಿಗಳಾಗಿ 30 ಕವಿಗಳು ಕವಿತೆ ವಾಚಿಸಲಿದ್ದಾರೆ ಎಂದರು.

ಸಾಯಂಕಾಲ ೪:೩೦ ಕ್ಕೆ  ಸಮಾರೋಪ ಸಮಾರಂಭ ನಡೆಯಲಿದ್ದು ಜಿಲ್ಲಾಧ್ಯಕ್ಷೆ ಪ್ರೊ. ಹಸೀನಾ ಎಚ್.ಕೆ. ಅಧ್ಯಕ್ಷತೆ ವಹಿಸಲಿದ್ದು ಕುವೆಂಪು ವಿವಿ ಕನ್ನಡ ಭಾರತಿ ಹಿರಿಯ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ ನಾಯಕ ಸಮಾರೋಪ ನುಡಿಗಳನ್ನಾಡಲಿದ್ದು,  ರಾಜೇಂದ್ರ ಚೆನ್ನಿ ಸಮ್ಮೇಳನ ನುಡಿಗಳನ್ನಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಸಿ. ಸೋಮಶೇಖರ್ ಹನ್ನೆರಡು ಸಾಧಕರಿಗೆ “ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿ” ಪ್ರದಾನ ಮಾಡುವರು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾ ನಿರ್ಣಯ ಮಂಡನೆ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾಧ್ಯಕ್ಷೆ ಪ್ರೊ. ಎಚ್ ಕೆ ಹಸೀನಾ, ತಾಲೂಕು ಅಧ್ಯಕ್ಷೆ ಇಂದಿರಾ ಪ್ರಕಾಶ್,  ಗೌರವ ಸಲಹೆಗಾರ ಸಯ್ಯದ್ ಮುಹಿಬುಲ್ಲಾ ಖಾದ್ರಿ,  ತೀರ್ಥಹಳ್ಳಿ ತಾಲೂಕು ಅಧ್ಯಕ್ಷೆ ಸುಜಾತಾ, ಪದ್ಮಶ್ರೀ ಗೋವಿಂದರಾಜ ಹಾಜರಿದ್ದರು.

ಸಮ್ಮೇಳನದಲ್ಲಿ  ನಾಡಿನ ಎಂಟು ಸಾಧಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಅವರೆಂದರೆ-    ಸಾಹಿತಿ ಎಸ್.ಕೆ. ಕರೀಂಖಾನ್ ಜಾನಪದ ಪ್ರಸ್ತಿಗೆ  ಕೊಪ್ಪಳದ ಕಲಾವಿದ ಸಾಹಿತಿ ರಮೇಶ ಗಬ್ಬೂರು, ಯು.ಆರ್. ಅನಂತಮೂರ್ತಿ ರಾಷ್ಟ್ರೀಯ ಜಾನಪದ ಪುರಸ್ಕಾರಕ್ಕೆ  ಹೊನ್ನಾವರದ ಕವಯತ್ರಿ ಶ್ರೀದೇವಿ ಕೆರೆಮನೆ, ನಾಡೋಜ  ದೇ. ಜ. ಗೌ. ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಮೈಸೂರಿನ  ಸಾಹಿತಿ ಪ್ರೊ. ಸಾತನೂರು  ದೇವರಾಜು,  ಪ್ರೊ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಕುವೆಂಪು ವಿವಿಯ ಪ್ರೊ. ಜಿ. ಪ್ರಶಾಂತ ನಾಯಕ, ಕಿ. ರಂ. ನಾಗರಾಜು – ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಕುವೆಂಪು ವಿವಿಯ ಪ್ರೊ, ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಕೈಯಾರ ಕಿಞ್ಞಣ್ಣ ರೈ ಗಡಿನಾಡ  ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಬೀದರ್ ನ ಪ್ರೊ.  ಎಂ. ಜಿ. ದೇಶಪಾಂಡೆ, ತಿರುಮಲಾಂಬ  ರಾಷ್ಟ್ರೀಯ ಸಾಹಿತ್ಯ ಪುರಸ್ಕಾರಕ್ಕೆ ಶಿವಮೊಗ್ಗದ ಮನೋವೈದ್ಯೆ ಡಾ|| ಕೆ. ಎಸ್. ಪವಿತ್ರ್ರಾ,  ಡಿ.ವಿ. ಗುಂಡಪ್ಪ ರಾಷ್ಟ್ರೀಯ ಮಾಧ್ಯಮ ಪುರಸ್ಕಾರಕ್ಕೆ  ಶಿವಮೊಗ್ಗದ ಕ್ರ್ರಾಂತಿದೀಪ ಸಂಪಾದಕ  ಎನ್. ಮಂಜುನಾಥ್  ಆಯ್ಕೆಯಾಗಿದ್ದಾರೆ.
– ಕೊಟ್ರೇಶ್ ಉಪ್ಪಾರ್, ಸಂಸ್ಥಾಪಕ ಅಧ್ಯಕ್ಷ

Share This Article
";