ಹಾಡಹಗಲೇ ಮನೆಗಳ್ಳತನ ಮಾಡಿದ್ದ ವ್ಯಕ್ತಿ ಸೆರೆ

Kranti Deepa

ಶಿವಮೊಗ್ಗ, ಅ.01 : ಶಿಕಾರಿಪುರ ಉಪವಿಭಾಗದ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಶಕುನವಳ್ಳಿ ಗ್ರಾಮದ ವಾಸಿ ಶಂಭುಲಿಂಗಪ್ಪ ಬಿನ್ ಮಲ್ಲೇಶಪ್ಪ ಅವರ ಮನೆಯ ಬೀಗ ಮುರಿದು ಬೆಡ್‌ರೂಂನಲ್ಲಿಟ್ಟಿದ್ದ ಬೀರುವಿನಲ್ಲಿದ್ದ 8,49,000/- ರೂ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಣ ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕ ಸಂಬಂಧಿಸಿದಂತೆ ಪೊಲೀಸರು ಕಳ್ಳನನ್ನು ಬಂಧಿಸಿ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಅಬ್ದುಲ್ ಸತ್ತರ್ ಬಿನ್ ಮೆಹಬೂಬ ಷರೀಫ್ (27 ) ಬಂಧಿತ ವಯ್ಕತಿ. ಈತ ಹಾನಗಲ್ ತಾಲೂಕು ಶ್ರೀಂಗೇರಿ ಗ್ರಾಮದ ವಸಿಯಾಗಿದ್ದಾನೆ.ವಶಕ್ಕೆ ಪಡೆದು ತನಿಖೆ ಕೈಗೊಂಡು ಪ್ರಕರಣದಲ್ಲಿ ಕಳ್ಳತನ ಮಾಡಿದ 8,49,000/- ರೂ ಮೌಲ್ಯದ 135 ಗ್ರಾಂ ಚಿನ್ನದ ಮತ್ತು 200 ಗ್ರಾಂ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಳ್ಳತನ ಜುಲೈ 25 ರ ಮಧ್ಯಾಹ್ನ ಮನೆಯ ಯಜಮಾನ ಬೀಗ ಹಾಕಿ ಜಮೀನಿಗೆ ಹೋದ ವೇಳೆ ಸಂಭವಿಸಿತ್ತು. ಈ ಬಗ್ಗೆ ಆನವಟ್ಟಿ ಠಾಣೆಗೆ ಮನೆಯ ಯಜಮಾನ ದೂರು ನಡೀದ್ದರು.ಸೊರಬ ಸಿಪಿಐ ರಾಜಶೇಖರ್ ಎಲ್ ಸಿ, ಎಸ್ ಐ ಚಂದನ್ ಪಿ,ಎಸ್,ಐ ನೇತೃತ್ವ್ವದಲ್ಲಿ ಈತನನ್ನು ಬಂಧಿಸಲಾಗಿದೆ.

Share This Article
";