ಶಿವಮೊಗ್ಗ, ಆ.12 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರಿ ನೌಕರ ಸಂಘದ ರಾಜ್ಯ ಅಧ್ಯಕ್ಷ ಷಡಕ್ಷರಿ ಮಾತನಾಡಿ , ನಾನು ಅಧಿಕಾರಿ. ಆ ಚೌಕಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದೇನೆ . ನಾನು ರಾಜಕೀಯ ವಿಚಾರವನ್ನು ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರಲ್ಲದೆ ಸಿದ್ಧಗಂಗಾ ಮಠಕ್ಕೆ ಅಕ್ಕಿ ಕಳುಹಿಸುವ ಸಂಬಂಧ ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದೆ.ಇದರಲ್ಲಿ ರಾಜಕೀಯವಿಲ್ಲ.
ಯೋಗೇಶ್ ಸಂಕುಚಿತತೆ ಬಿಟ್ಟು ಕೆಲಸ ಮಾಡಲಿ . ನನಗೆ ಯಾವುದೇ ಪಕ್ಷ ಇಲ್ಲ. ನಾನು ಸರ್ಕಾರಿ ನೌಕರಿಯನ್ನು ಮಾಡುತ್ತಿದ್ದೇನೆ . ಅಕ್ಕಿ ಕಳುಹಿಸುವ ಸಂಬಂಧದ ಹಲವು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಎಲ್ಲಾ ಧರ್ಮೀಯರು ಮತ್ತು ಜಾತಿಯವರು ಈ ಸಭೆಯಲ್ಲಿ ಇದ್ದರು . ಆದರೆ ಇದನ್ನೇ ಬೇರೆ ರೀತಿ ಅರ್ಥ ಕಲ್ಪಿಸಿ ಪ್ರಚಾರ ಮಾಡುವುದು ಸಲ್ಲದು ಎಂದು ಹೇಳಿದರು.ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಥವಾ ಲೋಗೋ ಕೆಳಗಡೆ ಕೆಲಸ ಮಾಡಿದ್ದಲ್ಲಿ ಫೋಟೋ ತೋರಿಸಲಿ. ಅದನ್ನು ಒಪ್ಪಿಕೊಳ್ಳುವೆ ನನಗೂ ಇತಿ ಮಿತಿ ಗೊತ್ತಿದೆ. ಆರೋಪ ಮಾಡುವುದು ಸರಿಯಲ್ಲ ಇಂತಹ ನೂರು ಫೋಟೋಗಳಿವೆ. ನಾನು ಕಳಿಸುವೆ . ಸಿದ್ದಗಂಗಾ ಮಠದ ವಿಷಯದಲ್ಲಿ ರಾಜಕಾರಣ ನಡೆಸಬಾರದು ಎಂದರು.