ಶಿವಮೊಗ್ಗ: ಸಾಗರ ತಾಲ್ಲೂಕು ಕರೂರು ಹೋಬಳಿಯ ಸುತ್ತಮುತ್ತ ಹುಲಿಕಾಟದ ಸುದ್ದಿ ವರದಿಯಾಗಿದೆ.
ಇಲ್ಲಿನ ಕುದರೂರು ಗ್ರಾಮದಲ್ಲಿ ಹುಲಿಯೊಂದು ದನವೊಂದನ್ನು ಕೊಂದು ಹಾಕಿದೆ. ದನಗಳನ್ನು ಬಿಟ್ಟು ಹೊಡೆದಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಇಲ್ಲಿನ ನಿವಾಸಿ ಗಣಪತಿ ಎಂಬವರಿಗೆ ಸೇರಿದ ಹಸು ಸಾವನ್ನಪ್ಪಿದ್ದು, ಪರಿಹಾರಕ್ಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಇಲ್ಲಿನ ಗುಡ್ಡ ಪ್ರದೇಶದಲ್ಲಿ ಹುಲಿಯ ಓಡಾಟವಿದ್ದು, ಗೋಮಾಳದಲ್ಲಿ ಮೇಯುತ್ತಿದ್ದ ಹಲವು ದನಗಳ ಮೇಲೆ ವ್ಯಾಘ್ರ ದಾಳಿ ನಡೆಸಿದೆ. ಇದೇ ರೀತಿಯ ದಾಳಿಯಿಂದ ಇದುವರೆಗೂ ಸುಮಾರು 20 ಜಾನುವಾರು ಸಾವನ್ನಪ್ಪಿದೆ. ಆದರೆ ಅರಣ್ಯ ಇಲಾಖೆ ಇದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು. ಈ ನಡುವೆ ಘಟನೆ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಲಭ್ಯವಾಗಿಲ್ಲ.