ಬೆಂಗಳೂರು, ಫೆ.02 : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸುವುದಕ್ಕೆ ತತ್ವವನ್ನ ಬದಿಗೊತ್ತಿ ಈ ತುರ್ತು ಅಧಿವೇಶನವನ್ನು ಕರೆದಿದೆ , ರಾಜ್ಯಪಾಲರ ಹತ್ತಿರ ಸುಳ್ಳು ಹೇಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸೋಮವಾರ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಸರ್ಕಾರ ಸುಳ್ಳನ್ನು ಮುತ್ತಿನ ಹಾರದಂತೆ ಪೋಣಿಸಿ ರಾಜ್ಯದ ಜನತೆಯ ಕುತ್ತಿಗೆಗೆ ಹಾಕಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಸುಳ್ಳುಗಳು ರಾಜ್ಯದ ಜನತೆಗೆ ಗೊತ್ತಾಗಲಿದೆ, ರಾಜ್ಯದ ಜನತೆ ತಕ್ಕ ಉತ್ತರ ಕೊಡುತ್ತಾರೆ, ಕಾಂಗ್ರೆಸ್ ಸರ್ಕಾರ ತಾವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ರಾಜ್ಯದ ಯುವಕರಿಗೆ ಉದ್ಯೋಗ ಕೊಡ್ತೀವಿ ಅನ್ನುವಂತಹ ಭರವಸೆಯನ್ನು ನೀಡಿದರು ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಮುಕ್ಕಾಲು ವರ್ಷವಾದರೂ ರಾಜ್ಯದ ಯುವಕರಿಗೆ ಯಾವ ಉದ್ಯೋಗವನ್ನು ನೀಡುತ್ತಿಲ್ಲ. ರಾಜ್ಯದಲ್ಲಿ 2,80,000 ಉದ್ಯೋಗಗಳು ಖಾಲಿ ಉಳಿದಿವೆ. ಪಂಚ ಗ್ಯಾರೆಂಟಿಗಳ ಜೊತೆಗೆ ರಾಜ್ಯದ ಯುವಕರಿಗೆ ಉದ್ಯೋಗ ಗ್ಯಾರೆಂಟಿ ಕೊಡುವುದು ಯಾರು? ಜೀವನದ ಗ್ಯಾರಂಟಿ ಕೊಡುವುದು ಯಾರು? ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಎಂದರು.
ರಾಜ್ಯದ ಅಂಗನವಾಡಿ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಾ ಬರುತ್ತಿದ್ದಾರೆ ಆದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ, ಕೇಂದ್ರದ ಎನ್.ಡಿ.ಎ ಸರ್ಕಾರ 2018ರಲ್ಲಿ ಇಡೀ ದೇಶದಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು 3,000 ದಿಂದ 4,500 ವನ್ನು ಹೆಚ್ಚಳ ಮಾಡಿತ್ತು ಅಂಗನವಾಡಿ ಸಹಾಯಕಿಯರಿಗೆ 2,250 ರೂ ಇಂದ 3,500 ರೂ ವರೆಗೆ ಗೌರವಧನವನ್ನ ಹೆಚ್ಚಳ ಮಾಡಿತ್ತು. ಅತಿಥಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ಸರ್ಕಾರಿ ನೇಮಕಾತಿ ಮಾಡಿ ಕೊಡುತ್ತೇವೆ ಎಂದು ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು, ಆದರೆ ತಿದ್ದುಪಡಿ ಮಾಡುವುದಿರಲಿ 25 ವರ್ಷ ಸೇವೆ ಸಲ್ಲಿಸಿರುವ 6,000 ಅತಿಥಿ ಉಪನ್ಯಾಸಕರನ್ನು ಇವತ್ತು ಕಾಂಗ್ರೆಸ್ ಸರ್ಕಾರ ಬೀದಿಗಿಳಿಸಿದೆ ಅವರಿಗೆ ಸರ್ಕಾರ ಯಾವ ನ್ಯಾಯ ಕೊಡಿಸಿದೆ. ಹಾಲಿನ ಪ್ರೋತ್ಸಾಹ ಧನವನ್ನು ಸರ್ಕಾರ 5 ರಿಂದ 7 ರೂಪಾಯಿಗೆ ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿತ್ತು, ಪ್ರೋತ್ಸಾಹ ಧನವನ್ನ ಹೆಚ್ಚಿಸುವುದಿರಲಿ ಸರಿ ಸುಮಾರು 38,000 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ಗುತ್ತಿಗೆದಾರರೆ ಹೇಳಿದ್ದಾರೆ. ಇವತ್ತು ಹೈನುಗಾರಿಕೆ ಮಾಡುತ್ತಿರುವಂತಹ ರೈತರು ಬಾಕಿ ಹಣ ಬಿಡುಗಡೆ ಮಾಡಿ ಇಲ್ಲವೇ ವಿಷ ಕೊಡಿ ಎಂದು ಕೇಳ್ತಾ ಇದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹೇಳಿದರು.
ರಾಜ್ಯದ ರಸ್ತೆಗಳು ಗುಂಡಿಮಯವಾಗಿವೆ, ರಸ್ತೆ ಒಳಗಡೆ ಗುಂಡಿ ಇದೆಯೋ ಅಥವಾ ಗುಂಡಿಯ ಒಳಗೆ ರಸ್ತೆ ಇದೆಯೋ ಎಂದು ಕಾಂಗ್ರೆಸ್ ಶಾಸಕರುಗಳನ್ನೇ ಕೇಳಬೇಕು, ಇನ್ನೂ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು. ಸೈಬರ್ ಅಪರಾಧದಲ್ಲಿ 2023 ರಲ್ಲಿ 873 ಕೋಟಿ ವಂಚನೆಯಾಗಿದ್ದರೆ 2024-25ರಲ್ಲಿ 2,562 ಕೋಟಿ ವಂಚನೆಯಾಗಿದೆ. ಅತ್ಯಾಚಾರ ಮತ್ತು ಬಾಲ್ಯ ವಿವಾಹ ಪ್ರಕರಣಗಳಲ್ಲಿ ಭಾರತದಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 16,500 ಖಾಲಿ ಹುದ್ದೆಗಳಿವೆ. ಸುಮಾರು ಕಡೆಗಳಲ್ಲಿ ಶೇಕಡ 30% ಸಿಬ್ಬಂದಿಗಳು, 40% ವೈದ್ಯರು, ತುರ್ತು ನಿಗಾ ಘಟಕದ ವೈದ್ಯರಲ್ಲಿ ಸುಮಾರು 70% ವೈದ್ಯರ ಕೊರತೆ ಇದೆ. ರಾಜ್ಯ ಸರ್ಕಾರ ಯಾವಾಗ ಈ ಹುದ್ದೆಗಳನ್ನು ತುಂಬಲಿದೆ ಎಂದು ಸರ್ಕಾರದ ಮುಂದೆ ಪ್ರಶ್ನೆ ಇಟ್ಟರು.
ಸಿ ಜಿ ಎಚ್ ಎಸ್ ರೇಟನ್ನು ಕೇಂದ್ರ ಸರ್ಕಾರ ಒಂದ ಸ್ಟ್ಯಾಂಡರ್ಡ್ ಫಿಕ್ಸ್ ಮಾಡಿದೆ ಸಿಸೆರಿಯನ್ ಡೆಲಿವರಿಗೆ ರೂ.14,000 ಇರುವುದನ್ನ ರೂ.30000 ಕ್ಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಫಿಕ್ಸ್ ಮಾಡಿದೆ. ಇವತ್ತು ರಾಜ್ಯದಲ್ಲಿ ಯಶಸ್ವಿನಿ ಯೋಜನೆಗೆ 14,000 ಇದೆ, ಹಾರ್ಟ್ ಬೈಪಾಸ್ ಸರ್ಜರಿಗೆ ಕೇಂದ್ರ ಸರ್ಕಾರದ್ದು 1,80,000 ಇದ್ದರೆ, ರಾಜ್ಯದಲ್ಲಿ ಕೇವಲ 90,000 ಇದೆ. ಹಾರ್ಟ್ ಸ್ಟಂಟ್ ಹಾಕುವುದಕ್ಕೆ ಕೇಂದ್ರ ಸರ್ಕಾರ ಒಂದು ಲಕ್ಷ ರೂ ನಿಗದಿ ಮಾಡಿದ್ದರೆ, ರಾಜ್ಯದಲ್ಲಿ ಕೇವಲ 60,000 ಇದೆ, ಜ್ಯೋತಿ ಸಂಜೀವಿನಿ ಯೋಜನೆಯನ್ನು ರಾಜ್ಯದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ ಅನುಷ್ಠಾನಗೊಳಿಸಿಲ್ಲ, ಸಾಧ್ಯವಾದರೆ ರಾಜ್ಯ ಸರ್ಕಾರ ಪತ್ರಕರ್ತರಿಗೂ ಕೂಡ ಯಾವುದಾದರು ಒಂದು ಆರೋಗ್ಯ ಯೋಜನೆಯಲ್ಲಿ ಅಳವಡಿಸಿದರೆ ತುಂಬಾ ಉಪಯೋಗವಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯರಿಗೆ ಭಾರತದ ತುಂಬಾ ರಾಜ್ಯದಲ್ಲಿ ಈ ಯೋಜನೆ ಜಾರಿಯಾದರೆ ರಾಜ್ಯದಲ್ಲಿ ಇನ್ನೂ ಕೂಡ ಜಾರಿಯಾಗಿಲ್ಲ. ರಾಜ್ಯದಲ್ಲಿ 1,417 ಜನೌಷಧಿ ಕೇಂದ್ರಗಳಿದ್ದರೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 180 ಜನ ಔಷಧಿ ಕೇಂದ್ರಗಳಿವೆ , ಆದರೆ ರಾಜ್ಯ ಸರ್ಕಾರ 180 ಜನ ಔಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿತ್ತು, ಇದಕ್ಕೆ ನ್ಯಾಯಾಲಯವು ಕೂಡ ಕೂಡಲೇ ಸೆರಿಯುವಂತೆ ಆದೇಶ ಹೊರಡಿಸಬೇಕು ಎಂದು ಆದೇಶ ನೀಡಿದರು ರಾಜ್ಯ ಸರ್ಕಾರ ತೆರೆಯುವುದಕ್ಕೆ ಮೀನಾ ಮೇಷ ಎಣಿಸುತ್ತಿದೆ, ಸರ್ಕಾರ ಸರ್ಕಾರಿ ಮೆಡಿಕಲ್ ಗಳಲ್ಲಿ ಉಚಿತವಾಗಿ ಔಷಧಿಗಳು ಸಿಗುತ್ತಿರುವಾಗ ಜನೌಷಧಿ ಕೇಂದ್ರಗಳು ಯಾಕೆ ಬೇಕು ಎಂದು ಹೇಳುತ್ತಿವೆ ಆದರೆ ಸರ್ಕಾರಿ ಮೆಡಿಕಲ್ ಗಳಲ್ಲಿ 693 ಔಷಧಿಗಳಲ್ಲಿ 344 ಔಷಧಿಗಳು ಅಂದರೆ ಸುಮಾರು ಶೇಕಡ 50ರಷ್ಟು ಔಷಧಿಗಳು ಲಭ್ಯವಿಲ್ಲ . ಇಡೀ ದೇಶದಲ್ಲಿ ಜನ ಔಷಧಿ ಕೇಂದ್ರಗಳಿಂದ ಸುಮಾರು 40 ಸಾವಿರ ಕೋಟಿ ಜನರ ಹಣ ಉಳಿತಾಯವಾಗಿದೆ. ಕಾರ್ಡಿಯಾಕ್ ಸ್ಟಂಟ್ ನ ಬೆಲೆ ಕಡಿಮೆ ಮಾಡಿರುವುದರಿಂದ 12,000 ಕೋಟಿ ಜನರ ಹಣ ಉಳಿತಾಯ ಆಗಿದೆ, ಡಯಾಲಿಸಿಸ್ ಗೆ ಆರು ತಿಂಗಳಿನಲ್ಲಿ 42 ಕೋಟಿ ಹಣ ಬಾಕಿ ಉಳಿದಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಾ ಇದೆ, ಅಂಬೇಡ್ಕರ್ ಅವರನ್ನು ವಿರೋಧಿಸಿದ್ದು , ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಸರ್ಕಾರ, ಸಂವಿಧಾನವನ್ನು ಅತಿ ಹೆಚ್ಚು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ದರು.
