ಮೈಸೂರು,ಅ.06 :‘ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಬಳಿಕ ರಾಜೀನಾಮೆ ನೀಡು ತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ವಿರುದ್ಧ ಮೈತ್ರಿಕೂಟದಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಯಶಸ್ವಿ ಯಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಇದಕ್ಕೆ ಕ್ಷಣಗಣನೆ ಆರಂಭವಾಗಿದೆ’ ಎಂದರು.
‘ಮುಖ್ಯಮಂತ್ರಿಯಾಗಿ ನಾನೇ ಮುಂದು ವರಿಯುತ್ತೇನೆ ಎಂದು ನಿತ್ಯವೂ ಹೇಳಿ ಕೊಳ್ಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರನ್ನು ಬೆಂಬಲಿಸಿ ಸಚಿವರೂ ಹೇಳಿಕೆ ನೀಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಸಚಿವ ಸತೀಶ ಜಾರಕಿ ಹೊಳಿ ಅವರನ್ನು ಸಿದ್ದ ರಾಮಯ್ಯ ಅವರೇ ದೆಹ ಲಿಗೆ ಕಳುಹಿಸಿಕೊಟ್ಟಿದ್ದಾರೆ. ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಡಬಹುದು. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಈ ಕುರಿತು ಚಿಂತನೆ ನಡೆದಿದೆ. ಇದು ಮುಖ್ಯ ಮಂತ್ರಿಗೂ ಗೊತ್ತಿದೆ’ ಎಂದು ಹೇಳಿದರು. ‘ಸಿಎಂ ಸ್ಥಾನಕ್ಕೆ ೭-೮ ಮಂದಿ ಕಾಯು ತ್ತಿದ್ದಾರೆ’ ಎಂದರು.
‘ಮುಡಾ ಪ್ರಕರಣ ೧೪ ನಿವೇಶನಗಳಿಗಷ್ಟೆ ಸಂಬಂಸಿದ್ದಲ್ಲ. ಸಾವಿರಾರು ಕೋಟಿ ರೂಪಾಯಿ ಹಗರಣ ಇದಾಗಿದೆ. ಮುಂದೆ ಇದು ಬಹಿರಂಗವಾಗುತ್ತದೆ. ಯಾವುದೇ ಹಗರಣ ನಡೆದಿಲ್ಲ ಎಂದು ವಾದಿಸುತ್ತಿ ದ್ದವರಿಗೆ ಈಗ ಯಾವ ಪರಿಸ್ಥಿತಿ ಬಂದಿದೆ ನೋಡಿ’ ಎಂದು ವ್ಯಂಗ್ಯವಾಡಿದರು.
‘ತಪ್ಪಿನ ಅರಿವಾದ್ದರಿಂದಲೇ ೧೪ ನಿವೇಶನ ವಾಪಸ್ ಮಾಡಿದ್ದಾರೆ. ಅರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗೆ ಅಕಾರದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಅನೇಕ ಸವಾಲುಗಳನ್ನು ಹಾಕಿ ದ್ದರು. ಈಗ ಅವರಿಗೇ ಈ ಪರಿಸ್ಥಿತಿ ಬಂದಿರುವಾಗ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗುತ್ತದೆ.
ಅಕಾರಕ್ಕೆ ಅಂಟಿಕೊಳ್ಳದೇ ಪಾರದರ್ಶಕ ತನಿಖೆಗೆ ಒಳಪಡಬೇಕು’ ಎಂದರು.‘ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಪಾದಯಾತ್ರೆಯನ್ನು ನಾವು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರನ್ನು ಕೇಳಿ ನಡೆಸಿರಲಿಲ್ಲ. ಅವರ ಹೇಳಿಕೆ ಜೆಡಿಎಸ್ ಆಂತರಿಕ ವಿಚಾರ; ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. ಜಿಟಿಡಿ ಯಾವಾಗ ಬೇಕಾದರೂ ಸರಿಹೋಗಬಹುದು’ ಎಂದು ಪ್ರತಿಕ್ರಿಯಿಸಿದರು.