ಶಿವಮೊಗ್ಗ, ಆಗಸ್ಟ್ , 28 : ಶಿವಮೊಗ್ಗದಲ್ಲಿ ಮಳೆ ಮತ್ತೆ ಜೋರಾಗಿರುವುದರಿಂದ ಬರಬೇಕಿದ್ದ ಎರಡು ವಿಮಾನಗಳು ಬುಧವಾರ ಹೈದರಾಬಾದ್‌ನತ್ತ ಹೋಗಿವೆ. ಪ್ರತಿಕೂಲ ಹವಾಮಾನದಿಂದಾಗಿ ಶಿವಮೊಗ್ಗಕ್ಕೆ ಬರಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ಗೆ ಕಳುಹಿಸಲಾಯಿತು.
ಗೋವಾದ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಸ್ಟಾರ್ ಏರ್‌ನ ವಿಮಾನ S5 211 ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಈ ವಿಮಾನವನ್ನು ಹೈದರಾಬಾದ್‌ಗೆ ಡೈವರ್ಟ್ ಮಾಡಲಾಗಿತ್ತು. ಅಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು.
ಇದೇ ರೀತಿ, ಚೆನ್ನೈಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಸ್ಪೈಸ್‌ಜೆಟ್‌ನ ವಿಮಾನ Sಉ 2710 ಅನ್ನು ಸಹ ಹೈದರಾಬಾದ್‌ಗೆ ದಿಕ್ಕು ಬದಲಿಸಲಾಯಿತು. ಆನಂತರ ಶಿವಮೊಗ್ಗದಿಂದ ಹೈದರಾಬಾದ್‌ಗೆ ಹೋಗಬೇಕಿದ್ದ ವಿಮಾನ ಎಸ್ ಜಿ- 2711 ಸಹ ರದ್ದುಗೊಂಡಿದೆ.