ಶಿವಮೊಗ್ಗ : ಅಂಗಡಿಯಲ್ಲಿ ಸಿಗರೇಟ್ ಪಡೆದು ಅದಕ್ಕೆ ಹಣ ಕೊಡದೆ ಮಾಲೀಕನಿಗೆ ಹೆದರಿಸಿದ ಆರೋಪದ ಮೇರೆಗೆ ಹೊಸಮನೆ ೪ನೇ ಕ್ರಾಸ್‌ನಲ್ಲಿರುವ ಸೇವಂತ್ ಯಾನೆ ಜೋಗಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೆಂಪಮ್ಮ ಎಂಬುವರು ಮನೆ ಮುಂದೆ ಗೂಡಂಗಡಿಯನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಗೆ ಬಂದ ಸೇವಂತ ಯಾನೆ ಜೋಗಿ ಸಿಗರೇಟ್ ತೆಗೆದುಕೊಂಡಿದ್ದಾನೆ.ಕೆಂಪಮ್ಮನವರು ಹಣ ಕೇಳಿದಾಗ ನಾನು ಏರಿಯಾದ ಡಾನ್ ನನ್ನ ಬಳಿನೆ ಹಣ ಕೇಳ್ತೀರಾ ಎಂದು ಗದರಿಸಿದ್ದಾನೆ.ನನ್ನನ್ನು ಕಂಡರೆ ನೀವೆಲ್ಲ ಹೆದರಬೇಕು ಎಂದು ಹೇಳಿದ ಜೋಗಿಗೆ ಕೆಂಪಮ್ಮನವರ ಪುತ್ರ ವಿವೇಕ ಎಂಬಾತನು ಹಣ ಕೇಳಿದರೆ ಯಾಕೆ ಜೋರು ಮಾಡುತ್ತೀಯಾ ತೆಗೆದುಕೊಂಡು ಹೋಗು ಎಂದು ಹೇಳಿದ್ದಾನೆ ಅಷ್ಟಕ್ಕೆ ಜೋಗಿ ಆತನನ್ನು ಎಳೆದುಕೊಂಡು ನೆಲಕ್ಕೆ ಬೀಳಿಸಿ ಕಾಲಿನಲ್ಲಿ ಓದಿದ್ದಾನೆ.
ಆಟೋದಲ್ಲಿ ಬಂದಿದ್ದ ಜೋಗಿಗೆ ಇನ್ನು ಮೂವರು ಸಾಥ್ ನೀಡಿದ್ದು ಕೆಂಪಮ್ಮ ಮತ್ತು ಕುಟುಂಬದವರಿಗೆ ಹಿಗ್ಗಮುಗ್ಗ ಥಳಿಸಿದ್ದಾನೆ .ಏರಿಯಾದ ಜನ ಸೇರುತ್ತಿದ್ದಂತೆಯೇ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಸಮನೆ ಸೇರಿದಂತೆ ನಗರದ ಹಲವು ಬಡಾವಣೆಗಳಲ್ಲಿ ಇಂತ ಪುಂಡು ಪೋಕರಿಗಳ ಹಾವಳಿ ಮಿತಿಮೀರಿದ್ದು ಯುವಕರು ,ಮಹಿಳೆಯರು ,ಯುವತಿಯರು ಓಡಾಡುವದೇ ಕಷ್ಟವಾಗಿದೆ.
ಬೆಳಗಿನ ವೇಳೆ ವಾಯುವಿಹಾರಕ್ಕೆ ಹೋಗುವಂತಹ ವ್ಯಕ್ತಿಗಳನ್ನೇ ಈ ಪುಂಡರ ತಂಡ ಗುರಿಯಾಗಿಸಿಕೊಂಡು ಅವರನ್ನು ಬೆದರಿಸಿ ಹಣ ಕೇಳುವಂತಹ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಸಣ್ಣ ಸಣ್ಣ ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಕೇಂದ್ರಗಳಿಗೆ ತೆರಳಿ ಹಣ ಸುಲಿಗೆಗೆ ಪ್ರಯತ್ನಿಸುತ್ತಿದ್ದು ಇವರುಗಳ ಹಾವಳಿಯನ್ನು ತಪ್ಪಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಯುವತಿಯರು ,ಮಹಿಳೆಯರು ಸಂಜೆ ವೇಳೆ ಓಡಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಇಲಾಖೆ ಗಸ್ತುಕಾರ್ಯ ಕೈಗೊಳ್ಳಬೇಕು ಎಂಬ ಒತ್ತಾಯ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.