ಕಾರ್ಡ್ ರದ್ದಿಲ್ಲ

Kranti Deepa

ಬೆಂಗಳೂರು,ನ.21 : ಪಡಿತರ ಚೀಟಿ ಪರಿಷ್ಕರಣೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ, ’ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ, ಬಿಪಿಎಲ್, ಎಪಿಎಲ್ ಕಾರ್ಡ್ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು 1,50,59,431 ಕಾರ್ಡ್ ಗಳಿವೆ. ಮುಖ್ಯಮಂತ್ರಿಗಳು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಎಲ್ಲಾ (ಬಿಪಿಎಲ್) ಕಾರ್ಡ್‌ಗಳನ್ನು ಮರುಸ್ಥಾಪಿಸಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸದ್ಯ 1,02,509  ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿದ್ದೇವೆ. ಉಳಿದ ಎಲ್ಲ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಂತೆಯೇ ಮಾನದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿ ಷ್ಕರಿಸಲಾಗಿದೆ. ಅನರ್ಹ ಎಂಬ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್‌ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್‌ಗಳನ್ನು ಎಪಿಎಲ್‌ಗೆ ಸೇರಿಸಲಾಗಿದೆ.

ಬಿಪಿಎಲ್‌ಗೆ ಅರ್ಹರಿದ್ದೂ ಕೂಡ ಎಪಿಎಲ್‌ಗೆ ಸೇರಿಸಿದ್ದರೇ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ. ಬಿಪಿಎಲ್‌ಗೆ ಅರ್ಹರಿದ್ದವರ ಕಾರ್ಡ್ ರದ್ದಾಗಿದ್ದರೆ ಒಂದು ವಾರ ಕಾಲಾವಕಾಶ ನೀಡಿ, ಮರು ನೋಂದಣಿ ಮಾಡಿಕೊಂಡು ಕಾರ್ಡ್ ಮರುಹಂಚಿಕೆ ಮಾಡುತ್ತೇವೆ ಎಂದರು.

ಅಧಿಕಾರಿಗಳ ತಪ್ಪಿಲ್ಲ:ಬಿಪಿಎಲ್ ಕಾರ್ಡ್‌ದಾರರನ್ನು ಎಪಿಎಲ್‌ಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತ ನಾಡಿದ ಅವರು, ಇದರಲ್ಲಿ ಅಕಾರಿಗಳ ತಪ್ಪಿಲ್ಲ, ಎಲ್ಲ ಗೊಂದಲದ ಹೊಣೆ ನಾನೇ ಹೊರುವೆ. ಅಕಾರಿಗಳ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡುವೆ. ಯಾವುದೇ ಅರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ. ಮಾನ ದಂಡಗಳ ಅನ್ವಯ ಪರಿಶೀಲನೆ ಮಾಡಿ ಪರಿ ಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಪರಿಷ್ಕರಿಸಲಾಗಿದೆ.

ಅನರ್ಹ ಎಂಬ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಲಾಗಿದೆ. ಬಿಪಿಎಲ್‌ಗೆ ಅನರ್ಹರು ಎಂದು ಕಂಡು ಬಂದಿರುವ ಕಾರ್ಡ್‌ಗಳನ್ನು ಎಪಿಎಲ್ ಗೆ ಸೇರಿಸಲಾಗಿದೆ. ಬಿಪಿಎಲ್?ಗೆ ಅರ್ಹರಿದ್ದೂ ಕೂಡ ಎಪಿಎಲ್‌ಗೆ ಸೇರಿಸಿದ್ದರೇ ಅಂಥವರಿಗೆ ಮರು ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಜೀನಾಮೆ ಕೇಳುವುದು ಅವರ ಕರ್ತವ್ಯ:
ಬಿಜೆಪಿ ವಿರೋಧ ಪಕ್ಷವಾಗಿದ್ದು, ಪಡಿತರ ಚೀಟಿ ಪರಿಷ್ಕರಣೆ ವಿಚಾರವಾಗಿ ರಾಜೀನಾಮೆ ಕೇಳುವುದು ಅವರ ಕರ್ತವ್ಯ. ಆದರೆ ಅದರ ಅಗತ್ಯವಿಲ್ಲ  ಎಂದರು.

Share This Article
";